Job Description: ಸಿಖ್ ಧರ್ಮದ ಹತ್ತು ಗುರುಗಳಲ್ಲಿ ಒಂಬತ್ತನೆಯವರಾದ ಗುರು ತೇಜ್ ಬಹದ್ದೂರ್ ಅವರು 1621 ರಲ್ಲಿ ಈಗಿನ ಪಂಜಾಬಿನ ಅಮೃತಸರದಲ್ಲಿ ಜನಿಸಿದರು. ಗುರು ಹರ್ಗೋಬಿಂದ್ ಅವರ ಕಿರಿಯ ಮಗರಾದ ಇವರ ಹುತಾತ್ಮರಾದ ದಿನವಾದ ನವೆಂಬರ್ 24 ರಂದು, ಪ್ರತಿವರ್ಷ "ಗುರು ತೇಜ್ ಬಹದ್ದೂರ್ನ ಶಹೀದಿ ದಿವಸ್" ಎಂದು ಸ್ಮರಿಸಲಾಗುತ್ತದೆ. ಕೇಂದ್ರ ಸರ್ಕಾರವು ಇವರ 400 ನೇ ಜಯಂತಿಯನ್ನು ಕ್ರಮಬದ್ಧವಾಗಿ ಆಚರಿಸುವ ಸಲುವಾಗಿ ಪ್ರಧಾನಿ ಮೋದಿ ಅವರ ನೇತೃತ್ವದ ಒಟ್ಟು 70 ಸದಸ್ಯ ಬಲದ ಉನ್ನತ ಮಟ್ಟದ ಸಮಿತಿಯನ್ನು ರಚಿಸಿದೆ. ಈ ಸಮಿತಿಯಲ್ಲಿರುವ ಪ್ರಮುಖರು : ಡಾ.ಮನಮೋಹನ್ ಸಿಂಗ್, ಓಂ ಬಿರ್ಲಾ, ರಾಜನಾಥ್ ಸಿಂಗ್, ಅಮಿತ್ ಷಾ, ನಿತಿನ್ ಗಡ್ಕರಿ, ನಿರ್ಮಲಾ ಸೀತಾರಾಮನ್, ಹರ್ದೀಪ್ ಸಿಂಗ್ ಪುರಿ, ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಸೇರಿ ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಹರಿಯಾಣ, ಬಿಹಾರ್, ತಮಿಳುನಾಡು, ಮಹಾರಾಷ್ಟ್ರ, ಉತ್ತರಾಖಂಡ, ಹಿಮಾಚಲ ಪ್ರದೇಶ, ಒಡಿಶಾ ಹಾಗೂ ರಾಜಸ್ಥಾನ ರಾಜ್ಯಗಳ ಮುಖ್ಯಮಂತ್ರಿಗಳು ಈ ಸಮಿತಿಯ ಸದಸ್ಯರಾಗಿದ್ದಾರೆ.