Job Description: ಅಮೆರಿಕ: ಜಾಗತಿಕವಾಗಿ ಕಾಡಿದ ಕೋರೋಣ ಸೋಂಕಿಗೆ ಲಸಿಕೆ ಸಿದ್ದವಾಗಿದ್ದು, ಇನ್ನು ಕೇವಲ ಒಂದು ವಾರದೊಳಗೆ ಜನರ ಬಳಕೆಗೆ ಸಿದ್ಧವಾಗಲಿದೆ ಎಂದು ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇತ್ತೀಚಿಗೆ ಘೋಷಿಸಿದ್ದಾರೆ. ಇದೆ ನವೆಂಬರ್ 03 ರಂದು ಅಮೇರಿಕಾದಲ್ಲಿ ಅಧ್ಯಕ್ಷೀಯ ಚುನಾವಣೆ ನಡೆಯಲಿದ್ದು, ಚುನಾವಣಾ ಪ್ರಚಾರದ ಭಾಷಣದಲ್ಲಿ ಟ್ರಂಪ್ ಈ ಘೋಷಣೆ ಹೊರಡಿಸಿದ್ದಾರೆ. ಕೋರೋಣ ಸೋಂಕು ಆರಂಭದಿಂದಲೂ ವಿಶ್ವ ಅರೋಗ್ಯ ಸಂಸ್ಥೆ ಸೇರಿ ಅನೇಕ ದೇಶಗಳಲ್ಲಿ ಕೊರೋನಾ ಲಸಿಕೆ ಪ್ರಯೋಗಗಳು ನಡೆಯುತ್ತಲಿದೆ. ಆದರೆ ಇದುವರೆಗೂ ಯಾವ ಲಸಿಕೆಯು ಪರಿಮಾಣಕಾರಿಯಾಗಿಲ್ಲ, ಇನ್ನು ರಷ್ಯಾ ದೇಶವು ಹಲವು ದಿನಗಳ ಹಿಂದೆಯೇ ಕೊರೋನಾಗೆ ಲಸಿಕೆಯನ್ನು ಕಂಡುಹಿಡಿದಿರುವುದಾಗಿ ಘೋಷಿಸಿತ್ತಾದರೂ, ನಂತರದ ದಿನಗಳಲ್ಲಿ ಅದು ಸಹ ವಿಫಲವಾಗಿದೆ ಎಂಬ ಸುದ್ದಿಗಳು ಹರಿದಾಡುತ್ತಿವೆ.