Job Description: ಬೆಂಗಳೂರು: ರಾಜ್ಯರಾಜಧಾನಿ ಬೆಂಗಳೂರಿನಲ್ಲಿ ಸಾರ್ವಜನಿಕರ ಓಡಾಟಕ್ಕಾಗಿ "ಎಲೆಕ್ಟ್ರಿಕ್ ಬಸ್"ಗಳ ಸಂಚಾರಕ್ಕೆ ಸರ್ಕಾರ ಯೋಜನೆ ರೂಪಿಸಿದ್ದು, ಇದೀಗ 'ಓಲೆಕ್ಟ್ರಾ' ಎಂಬ ಸಂಸ್ಥೆಯು ದೇಶಿ ನಿರ್ಮಿತ ಎಲೆಕ್ಟ್ರಿಕ್ ಬಸ್ಗಳ ಪರೀಕ್ಷಾರ್ಥ ಸಂಚಾರವನ್ನು ಇತ್ತೀಚಿಗೆ ನಗರದಲ್ಲಿ ನಡೆಸಲಾಯಿತು. * ಬ್ಯಾಟರಿ ತಂತ್ರಜ್ಞಾನದ ಹೊರತು ಪಡಿಸಿ ಬಸ್ಸುಗಳಲ್ಲಿ ಪೂರ್ಣ ಪ್ರಮಾಣದ ದೇಶಿಯ ತಂತ್ರಜ್ಞಾನ ಬಳಸಲಾಗಿದೆ. * ಈ ಬಸ್ಸುಗಳು ಪ್ರತಿ ಕಿಲೋ ಮೀಟರ್ ಸಂಚಾರಕ್ಕೆ 1.2 ರಿಂದ 1.4 KWH ವಿದ್ಯುತ್ ಬಳಸಲಿವೆ. ಅಲ್ಲದೆ ಬ್ಯಾಟರಿ ಪೂರ್ಣ ಚಾರ್ಜ್ ಮಾಡಲು ಕೇವಲ 2 ರಿಂದ 3 ಗಂಟೆ ಅವಧಿ ಸಾಕು. * ಒಮ್ಮೆ ಬ್ಯಾಟರಿಯನ್ನು ಪೂರ್ಣ ಚಾರ್ಜ್ ಮಾಡಿದರೆ 200-250 ಕಿಲೋ ಮೀಟರ್ ಸಂಚಾರ ಮಾಡಬಹುದಾಗಿದೆ. * 'ಓಲೆಕ್ಟ್ರಾ' ಸಂತೆಯ ಈ ಬಸ್ಸುಗಳು ಈಗಾಗಲೇ ಹೈದರಾಬಾದ್, ಪುಣೆ-ಮುಂಬೈ, ಹಿಮಾಚಲ ಪ್ರದೇಶದ ಮನಾಲಿಯಲ್ಲಿ ಯಶಸ್ವಿಯೆಯಾಗಿ ಸಂಚಾರ ನಡೆಸಿವೆ. ಹಾಗೂ ಇನ್ನು ಹವಳು ಕಡೆಗಳಲ್ಲಿ ಈ ಬಸ್ ಸಂಚಾರಕ್ಕೆ ಅನುಮತಿ ದೊರೆತಿದೆ. * ಕೇಂದ್ರ ಸರ್ಕಾರದ ಫೇಮ್-2 ಯೋಜನೆಯಡಿಯಲ್ಲಿ ಪ್ರತಿ ಬಸ್ಸಿಗೆ ₹55 ಲಕ್ಷ ಮತ್ತು ರಾಜ್ಯ ಸರ್ಕಾರದಿಂದ ₹33 ಲಕ್ಷ ನೆರವು ಒಟ್ಟು ಸೇರಿ ಪ್ರತಿ ಬಸ್ಸಿಗೆ ₹88 ಲಕ್ಷ ತಗುಲಲಿದೆ.