Job Description: ನವದೆಹಲಿ : ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ) ಯಿಂದ ನಿರ್ಮಿಸಲಾದ ಟ್ಯಾಂಕ್-ನಿರೋಧಕ ಕ್ಷಿಪಣಿ 'ನಾಗ್' (ಎಟಿಜಿಎಂ ನಾಗ್) ಅನ್ನು ರಾಜಸ್ಥಾನದ ಪೋಖರಣ್ ಸೇನಾ ರೇಂಜ್ನಲ್ಲಿ ಅಂತಿಮ ಪರೀಕ್ಷೆಗೊಳಪಡಿಸಲಾಗಿದ್ದು, ಅಂತಿಮ ಪರೀಕ್ಷೆ ಯಶಸ್ವಿಯಾಗಿ ನೆರವೇರಿದೆ. 'ನಾಗ್' ಕ್ಷಿಪಣಿಯನ್ನು ಹಂತ ಹಂತವಾಗಿ ಒಟ್ಟು ವಿವಿಧ ಹತ್ತು ಪರೀಕ್ಷೆಗೊಳಪಡಿಸಲಾಗಿದ್ದು, ಈ ಎಲ್ಲಾ ಪರೀಕ್ಷೆಗಳನ್ನು ಯಶಸ್ವಿಯಾಗಿ ಪೂರೈಸಿರುವದರಿಂದ 'ನಾಗ್' ಕ್ಷಿಪಣಿ ಸೇನೆಗೆ ಶೀಘ್ರವೇ ಸೇರ್ಪಡೆಯಾಗಲಿದೆ.