Job Description: ಭಾರತದ ಪ್ರದಾನ ಮಂತ್ರಿಯಾದ ನರೇಂದ್ರ ಮೋದಿಯವರು ಇಂದು (ಅಕ್ಟೋಬರ್ 24) ಗುಜರಾತ್ ರಾಜ್ಯದಲ್ಲಿ ಒಟ್ಟು ಮೂರೂ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. * ವಿಶ್ವಸಂಸ್ಥೆಯ ಮೆಹ್ತಾ ಹೃದಯ ಸಂಶೋಧನಾ ಸಂಸ್ಥೆ, ಅಹಮದಾಬಾದ * ಗಿರ್ನಾರ್ ರೋಪ್ವೇ ಯೋಜನೆ * ಕಿಸಾನ್ ಸರ್ವೋದಯ್ ಯೋಜನೆ - ಅಹಮದಾಬಾದನಲ್ಲಿ ವಿಶ್ವಸಂಸ್ಥೆಯ ಮೆಹ್ತಾ ಹೃದಯ ಸಂಶೋಧನಾ ಸಂಸ್ಥೆಯನ್ನು ಒಟ್ಟು 850 ಹಾಸಿಗೆಗಳ ಸಾಮರ್ಥ್ಯಕ್ಕೆ ಏರಿಸಲಾಗಿದೆ. ಇಲ್ಲಿ ಮಕ್ಕಳ ಹೃದಯ ಚಿಕಿತ್ಸೆಗಾಗಿ ವಿಶೇಷ ಸೌಲಭ್ಯ ಕಲ್ಪಿಸಲಾಗಿದೆ. - ಗುಜರಾತ್ನ ರಾಜ್ಯದ ಜುನಾಗಧ್ ಜಿಲ್ಲೆಯ ಪವಿತ್ರ ಯಾತ್ರಾಸ್ಥಳವಾದ ಮೌಂಟ್ ಗಿರ್ನಾರ್ ನಲ್ಲಿ 1983 ರಲ್ಲಿ ಆರಂಭಿಸಲಾದ ರೋಪ್ ವೇ ಯೋಜನೆಯು ಏಷ್ಯಾದ ಉದ್ದದ ರೋಪ್ವೇ ಆಗಿರುತ್ತದೆ. - ಗುಜರಾತ್ ಪ್ರದೇಶದ ರೈತರಿಗೆ ಕೃಷಿಗೆ ವಿದ್ಯುತ್ ಒದಗಿಸುವ ಕಿಸಾನ್ ಸೂರ್ಯೋದಯ ಯೋಜನೆಯು ನೀರಾವರಿಗಾಗಿ ಹಗಲಿನ ಸಮಯದಲ್ಲಿ ವಿದ್ಯುತ್ ಸರಬರಾಜುನ್ನು ಒದಗಿಸಲಿದೆ. ಗುಜರಾತ್ ರಾಜ್ಯ ಸರ್ಕಾರವು ಈ ಯೋಜನೆಗಾಗಿ 3,500 ಕೋಟಿ ರೂಪಾಯಿ ವ್ಯಯಿಸಲಿದೆ.