Job Description: ಭಾರತೀಯ ನೌಕಾಪಡೆಯ ದಕ್ಷಿಣ ನೌಕಾ ಕಮಾಂಡ್ ಕೊಚ್ಚಿಯಲ್ಲಿ ಅಕ್ಟೋಬರ್ 22, 2020 ರಂದು, ಡಾರ್ನಿಯರ್ ವಿಮಾನದಲ್ಲಿ ಮಹಿಳಾ ಪೈಲಟ್ಗಳ ಮೊದಲ ಬ್ಯಾಚ್ ತನ್ನ ಕಾರ್ಯಾಚರಣೆಗೆ ಸಿದ್ದಗೊಂಡಿದೆ. ಲೆಫ್ಟಿನೆಂಟ್ ದಿವ್ಯಾ ಶರ್ಮಾ, ಲೆಫ್ಟಿನೆಂಟ್ ಶಿವಾಂಗಿ ಮತ್ತು ಲೆಫ್ಟಿನೆಂಟ್ ಶುಭಂಗಿ ಸ್ವರೂಪ್ ಈ ಮೂವರು ಮಹಿಳಾ ಪೈಲಟ್ಗಳು ಭಾರತೀಯ ನೌಕಾಪಡೆಯೊಂದಿಗೆ DOFT ಕೋರ್ಸ್ಗೆ ತರಬೇತಿ ಪಡೆದಿರುತ್ತಾರೆ. ಪ್ರಸ್ತುತ ಭಾರತೀಯ ಮಿಲಿಟರಿಯಲ್ಲಿ 3,5000 ಕ್ಕೂ ಹೆಚ್ಚು ಮಹಿಳೆಯರು ಸೇವೆ ಸಲ್ಲಿಸುತ್ತಿದ್ದು, 2015 ರವರೆಗೆ ಯುದ್ಧ ಪಾತ್ರದಲ್ಲಿ ನಿಯೋಜಿಸದಂತೆ ನಿರ್ಬಂಧಿಸಲಾಗಿತ್ತು. ಭಾರತೀಯ ಇತಿಹಾಸದಲ್ಲಿ ಮೊದಲ ಬಾರಿಗೆ 2015 ರಲ್ಲಿ ಮಹಿಳೆಯರನ್ನು ವಾಯುಪಡೆಗೆ ಸೇರ್ಪಡೆಮಾಡಲಾಯಿತು. * 1992 ರಲ್ಲಿ ಮೊದಲ ಬಾರಿಗೆ ಭಾರತೀಯ ಮಹಿಳೆಯರನ್ನು ಭಾರತೀಯ ಸೇನೆಯಲ್ಲಿ ನಿಯೋಜಿಸಲಾಯಿತು. * ಪ್ರಾರಂಭದ ದಿನಗಳಲ್ಲಿ ಅವರಿಗೆ 6 ವರ್ಷಗಳ ಕಾಲ ಮಾತ್ರ ಸೇವೆ ಸಲ್ಲಿಸಲು ಅವಕಾಶವಿತ್ತು, ಇದೀಗ ಮಹಿಳಾ ಸೈನಿಕರು 14 ವರ್ಷ ಸೇನೆಯಲ್ಲಿ ಸೇವೆ ಸಲ್ಲಿಸಬಹುದು. * ಭಾರತೀಯ ಸೇನೆಯಲ್ಲಿ ಮೊತ್ತ ಮೊದಲು ಮಹಿಳೆಯರಿಗೆ ದಾದಿಯರಾಗಿ ಸೇವೆ ಸಲ್ಲಿಸಲು 1888 ರಲ್ಲಿಅವಕಾಶ ನೀಡಲಾಗಿತ್ತು.