Job Description: ಕೇಂದ್ರ ಸಚಿವ ಶ್ರೀ ಹರ್ದೀಪ್ ಸಿಂಗ್ ಪುರಿ ಅವರು ಅಕ್ಟೋಬರ್ 21, 2020 ರಂದು "ಇ-ಧಾರ್ತಿ ಜಿಯೋ ಪೋರ್ಟಲ್" ಗೆ ಚಾಲನೆ ನೀಡಿದರು. ಈ ನೂತನ ಪೋರ್ಟಲ್ ಮೂಲಕ ಭೌಗೋಳಿಕ ಮಾಹಿತಿ ವ್ಯವಸ್ಥೆ, ನಕ್ಷೆ ಮತ್ತು ಗುತ್ತಿಗೆ ಯೋಜನೆಗಳ ಮಾಹಿತಿಯನ್ನು ಪಡೆಯಬಹುದಾಗಿದೆ. * ಈ ಪೋರ್ಟಲ್ ಮೂಲಕ ಆಸ್ತಿ ಪ್ರಮಾಣಪತ್ರದ ವಿವರಗಳು ಮತ್ತು ಆಸ್ತಿಯ ಆನ್ಲೈನ್ ನಕ್ಷೆಯನ್ನು ಸುಲಭವಾಗಿ ಪಡೆಯಬಹುದಾಗಿದೆ. * ಭೂ ಮತ್ತು ಅಭಿವೃದ್ಧಿ ಕಚೇರಿ 50000 ಕ್ಕೂ ಹೆಚ್ಚು ವಸತಿ, ವಾಣಿಜ್ಯ, ಕೈಗಾರಿಕಾ ಮತ್ತು ಸಾಂಸ್ಥಿಕ ಆಸ್ತಿಗಳೊಂದಿಗೆ ವ್ಯವಹರಿಸುತ್ತದೆ.