Job Description: ನವದೆಹಲಿ: ಇತ್ತೀಚಿಗೆ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್, ಎಜುಕೇಶನ್ ಆಯಂಡ್ ರಿಸರ್ಚ್, ಚೆನ್ನೈನ ಅಣ್ಣಾ ವಿಶ್ವ ವಿದ್ಯಾಲಯ ಹಾಗೂ ಜರ್ಮನಿಯ ಮ್ಯಾಕ್ಸ್ ಪ್ಲಾಂಕ್ ಇನ್ಸ್ಟಿಟ್ಯೂಟ್ ಫಾರ್ ದ ಸೈನ್ಸ್ ಆಫ್ ಹ್ಯೂಮನ್ ಹಿಸ್ಟರಿ (MPI-SHH) ವಿಜ್ಞಾನಿಗಳು jantiyagi ನಡೆಸಿದ ಅಧ್ಯಯನದ ಪ್ರಕಾರ ರಾಜಸ್ಥಾನ ಥಾರ್ ಮರುಭೂಮಿಯಲ್ಲಿ ಸುಮಾರು 172000 ವರ್ಷಗಳ ಹಿಂದೆ ನದಿಯೊಂದು ಹರಿಯುತ್ತಿತ್ತು ಹಾಗೂ ಅದು ಜನರ ಜೀವನಾಡಿಯಾಗಿತ್ತು ಎಂದು ಕುರುಹುಗಳ ಪತ್ತೆಯಾಗಿರುವದಾಗಿ ತಿಳಿದು ಬಂದಿದೆ. ಬಿಕಾನೇರ್ ಸಮೀಪದ ನಲ್ ಎಂಬ ಗ್ರಾಮದಲ್ಲಿ 2014 ರಿಂದ 2019ರ ಅವಧಿಯಲ್ಲಿ ನಡೆಸಿದ ಸಂಶೋದನೆಗಳಿಂದಾಗಿ ಈ ಅಂಶ ದೃಢಪಟ್ಟಿದೆ.