Job Description: ಮೈಸೂರು : ವಿಶ್ವ ವಿಖ್ಯಾತ ಮೈಸೂರು ದಸರಾವು ಪ್ರತಿ ವರ್ಷ ವಿಶ್ವದ ಹಲವು ಪ್ರವಾಸಿಗರನ್ನು ಆಕರ್ಷಿಸುತ್ತಿತ್ತು, ಆದರೆ ಈ ಬಾರಿ ಕೋರೋಣ ಭೀತಿಯಿಂದ ಸರಳವಾಗಿ ದಸರಾ ಆಚರಣೆ ಮಾಡಲು ರಾಜ್ಯ ಸರ್ಕಾರವು ಉದ್ದೇಶಿಸಿರುವ ಹಿನ್ನಲೆ ಜಂಬೂ ಸವಾರಿಯಲ್ಲಿ ಕೇವಲ 2 ಸ್ತಬ್ಧ ಚಿತ್ರಗಳ ಮೆರವಣಿಗೆ ನಡೆಸಲು ಉದ್ದೇಶಿಸಲಾಗಿದೆ. * ಮೈಸೂರು ಸಂಸ್ಕೃತಿ ಪ್ರತೀಕವಾಗಿರುವ ಆನೆ ಬಂಡಿ ಸ್ತಬ್ಧ ಚಿತ್ರ ಹಾಗೂ ಕೊರೊನಾ ವಾರಿಯರ್ಸ್ ಗೆ ಅಭಿನಂದನೆ ಸಲ್ಲಿಸುವ ಸ್ತಬ್ಧ ಚಿತ್ರಗಳ ಮೆರವಣಿಗೆ ಈ ವರ್ಷ ಜಂಬೂ ಸವಾರಿಯಲ್ಲಿ ನಡೆಯಲಿದೆ. * ಪ್ರತಿ ವರ್ಷ ರಾಜ್ಯದ ಜಿಲ್ಲೆಗಳ ಸಂಸ್ಕೃತಿಯನ್ನು ಬಿಂಬಿಸುವ 30 ಕ್ಕೂ ಅಧಿಕ ಸ್ತಬ್ಧ ಚಿತ್ರಗಳ ಮೆರವಣಿಗೆ ನಡೆಯುತ್ತಿತ್ತು.