Job Description: ತಮಿಳುನಾಡು ರಾಜ್ಯದಲ್ಲಿನ 80,000 ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳಲ್ಲಿ ಉತ್ತಮ ಬೋಧನಾ ವಾತಾವರಣ ನಿರ್ಮಿಸಲು "ಸ್ಮಾರ್ಟ್ ಬ್ಲ್ಯಾಕ್ ಬೋರ್ಡ್ ಯೋಜನೆ"ಯನ್ನು ತಮಿಳುನಾಡು ರಾಜ್ಯ ಸರ್ಕಾರ ಜಾರಿಗೆ ತರಲು ಮುಂದಾಗಿದೆ. ತಮಿಳುನಾಡು ರಾಜ್ಯ ಸರ್ಕಾರವು ಸ್ಮಾರ್ಟ್ ಬ್ಲ್ಯಾಕ್ಬೋರ್ಡ್ ಯೋಜನೆಯುಡಿ ಡಿಜಿಟಲ್ ತರಗತಿ ಕೋಣೆಗಳಲ್ಲಿ ಪೆನ್ ಡ್ರೈವ್ಗಳನ್ನು ಬಳಸಿಕೊಂಡು ಕಂಪ್ಯೂಟರ್ ಪರದೆಗಳ ಮೂಲಕ ಬೋದಿಸಲಾಗುವದು. ಈ ಮೂಲಕ 2020-21ರ ಪಠ್ಯಕ್ರಮವನ್ನು ಶೇಕಡಾ 40 ರಷ್ಟು ಕಡಿಮೆ ಮಾಡಲು ತಮಿಳುನಾಡು ರಾಜ್ಯ ಸರ್ಕಾರವು ನಿರ್ಧರಿಸಿದೆ. * ರಾಜಸ್ಥಾನ ರಾಜ್ಯದಲ್ಲಿ ಕಲಿಕೆ ನಿರ್ವಹಣೆಗಾಗಿ ಸಾಮಾಜಿಕ ಮಾಧ್ಯಮ ಇಂಟರ್ಫೇಸ್, SMILE ಅನ್ನು ಪ್ರಾರಂಭಿಸಲಾಯಿತು. * ಜಮ್ಮು ರಾಜ್ಯದಲ್ಲಿ ಪ್ರಾಜೆಕ್ಟ್ ಹೋಮ್ ತರಗತಿಗಳನ್ನು ಪ್ರಾರಂಭಿಸಲಾಯಿತು * ಛತ್ತೀಸ್ಗಡ್ ರಾಜ್ಯದಲ್ಲಿ "ಪಧೈ ತುನ್ಹಾರ್ ದುವಾರ್" ಎಂಬ ಕಾರ್ಯಕ್ರಮದಡಿಯಲ್ಲಿ ವಿದ್ಯಾರ್ಥಿಗಳ ಮನೆ ಬಾಗಿಲಿನಲ್ಲಿ ಶಿಕ್ಷಣವನ್ನು ಪ್ರಾರಂಭಿಸಲಾಯಿತು. * ಬಿಹಾರ ರಾಜ್ಯದಲ್ಲಿ "ಉನ್ನಾಯನ್" ಎಂಬ ಅಭಿಯಾನ ಪ್ರಾರಂಭಿಸಲಾಯಿತು. * ಕೇರಳ ಸರ್ಕಾರ ರಾಜ್ಯದಲ್ಲಿ "ಕೈಟ್ ವಿಕ್ಟರ್ಸ್" ಎಂಬ ಟಿವಿ ಚಾನೆಲ್ ಮೂಲಕ ಮಕ್ಕಳಿಗೆ ಶಿಕ್ಷಣ ನೀಡುತ್ತಿದೆ. * ಕರ್ನಾಟಕ ರಾಜ್ಯದಲ್ಲಿ ಶಿಕ್ಷಣ ಸಚಿವಾಲಯವು ಕೋವಿಡ್ -19 ಕಾಲದಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣಕೊಡುವ ಸಲುವಾಗಿ "ವಿದ್ಯಾಗಮ" ಎಂಬ ಕಾರ್ಯಕ್ರಮವನ್ನು ಆರಂಭಿಸಲಾಗಿದೆ