Job Description: ರಾಷ್ಟ್ರ ರಾಜಧಾನಿ ದೆಹಲಿ ಹಾಗೂ ವಾಣಿಜ್ಯ ನಗರಿ ಮುಂಬೈ ನಡುವಿನ ರಸ್ತೆ ಸಂಪರ್ಕವನ್ನು ಕಡಿಮೆ ಮಾಡುವ ಉದ್ದೇಶದಿಂದ ಕೇಂದ್ರ ಸರ್ಕಾರದ ಯೋಜನೆಯಾದ ಭಾರತ್ಮಾಲಾ ಅಡಿಯಲ್ಲಿ ರಾಜಸ್ಥಾನದಲ್ಲಿ 60 ಕಿ.ಮೀ. ಉದ್ದದ ಗ್ರೀನ್ಫೀಲ್ಡ್ ಹೆದ್ದಾರಿ ನಿರ್ಮಾಣ ಮಾಡಲು ಯೋಜಿಸಲಾಗಿದೆ. * ಈ ಯೋಜನೆಯಡಿ ನಿರ್ಮಿಸಲಾಗುವ ಹೆದ್ದಾರಿಯು ರಾಜಸ್ತಾನದ ಮುಕುಂದ್ರ ಪರ್ವತ ಹುಲಿ ಸಂರಕ್ಷಿತಾರಣ್ಯದಲ್ಲಿ ಹಾದು ಹೋಗಲಿದ್ದು, ಇಲ್ಲಿ ಹೆದ್ದಾರಿ ಸುರಂಗ ನಿರ್ಮಿಸಲಾಗುವದು. * ರಾಜಸ್ಥಾನದಲ್ಲಿ ಭೆಂಡಾ ಹೀರಾ ಹಳ್ಳಿಯಿಂದ ಮೂಂದಿಯಾ ಹಳ್ಳಿಯವರೆಗೆ ಎಂಟು ಪಥಗಳಲ್ಲಿ ಈ ಹೆದ್ದಾರಿ ನಿರ್ಮಿಸಲು ಯೋಜಿಸಲಾಗಿದೆ. * ಕೇಂದ್ರ ಪರಿಸರ ಇಲಾಖೆಯ ಮೂಲಗಳ ಪ್ರಕಾರ ಗುರುಗ್ರಾಮ, ಭರತ್ಪುರ, ಕೋಟಾ ಸೇರಿ ಹಲವು ನಗರಕ್ಕೆ ಈ ಹೆದ್ದಾರಿಯಿಂದ ಸಂಪರ್ಕ ದೊರೆಯಲಿದೆ.