Job Description: ನವದೆಹಲಿ: ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಸ್ಥೆ (OECD) ಇತ್ತೀಚಿಗೆ 2018 ರಲ್ಲಿ ವಲಸೆ ಹೋಗಿ ವಿವಿಧ ರಾಷ್ಟ್ರಗಳ ಪೌರತ್ವ ಪಡೆದಿರುವವರ ಕುರಿತು ವರದಿಯನ್ನು ಪ್ರಕಟಿಸಿದ್ದು, ಈ ವರದಿಯ ಪ್ರಕಾರ ಚೀನಾ ರಾಷ್ಟ್ರದಿಂದ ಅತಿ ಹೆಚ್ಚು ಹೆಚ್ಚು ಜನ ವಲಸೆ ಹೋಗಿದ್ದು, ಭಾರತವು ಎರಡನೇ ಸ್ಥಾನದಲ್ಲಿದೆ. ಇನ್ನು ಭಾರತದಿಂದ ವಲಸೆ ಹೋಗಿರುವವರ ಪ್ರಮಾಣ ಶೇಕಡ 10 ಹೆಚ್ಚಳವಾಗಿ 3.30 ಲಕ್ಷಕ್ಕೆ ಏರಿಕೆಯಾಗಿದ್ದು, ಇದು ಒಟ್ಟು ವಲಸಿಗರ ಪೈಕಿ ಶೇಕಡ 5 ರಷ್ಟಿದೆ ಎಂದು OECD ವರದಿಯಲ್ಲಿ ತಿಳಿಸಲಾಗಿದೆ. ಇನ್ನು ಅತಿ ಹೆಚ್ಚು ವಲಸಿಗರು ಹೋಗಿರುವ ರಾಷ್ಟ್ರಗಳ ಪೈಕಿ ಅಮೆರಿಕ, ಕೆನಡಾ, ಇಟಲಿ ಮತ್ತು ಬ್ರಿಟನ್ ಕ್ರಮವಾಗಿ ಅಗ್ರಸ್ಥಾನದಲ್ಲಿವೆ. ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಸ್ಥೆ(OECD) : 1960ರ ಡಿಸೆಂಬರ್ 14ರಂದು ಆರಂಭಿಸಲಾದ ಈ ಸಂಸ್ಥೆಯು ಆರಂಭದಲ್ಲಿ ಅಮೆರಿಕ ಆಸ್ಟ್ರೇಲಿಯಾ, ಬೆಲ್ಜಿಯಂ ಸೇರಿ 20 ರಾಷ್ಟ್ರಗಳ ಪರಸ್ಪರ ಆರ್ಥಿಕ ಸಹಕಾರಕ್ಕಾಗಿ ಕಾರ್ಯಾರಂಭಮಾಡಿತು. ನಂತರದ ದಿನಗಳಲ್ಲಿ ಹಂತ ಹಂತವಾಗಿ ಇನ್ನು 17 ದೇಶಗಳು ಈ ಗುಂಪಿಗೆ ಸೇರ್ಪಡೆಗೊಂಡಿವೆ. ಪ್ರಸ್ತುತ ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಸ್ಥೆಯಾ ಒಟ್ಟು ಸದಸ್ಯ ಬಲವು 37 ಆಗಿದೆ.