Job Description: ಇಸ್ಲಾಮಾಬಾದ್ : ಗುರುನಾನಕ್ ಅವರ 551ನೇ ಜಯಂತಿಯಲ್ಲಿ ಪಾಲ್ಗೊಳ್ಳಲು ಭಾರತೀಯ ಸಿಖ್ಖರಿಗೆ ಪಾಲ್ಗೊಳ್ಳಲು ಪಾಕಿಸ್ತಾನ ಆಹ್ವಾನ ನೀಡಿದೆ. ಪ್ರತಿ ವರ್ಷ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಗುರುನಾನಕ್ ಅವರ ಜನ್ಮಸ್ಥಳವಾದ ಗುರುದ್ವಾರ ನಂಕನ ಸಾಹಿಬ್ ನಲ್ಲಿ ಭಾರತ ಮತ್ತು ವಿಶ್ವದ ವಿವಿಧ ಭಾಗಗಳಲ್ಲಿ ನೆಲೆಸಿರುವ ಸಿಖ್ಖರು ಗುರುನಾನಕ್ ರ ಜಯಂತಿ ಉತ್ಸಹವದಲ್ಲಿ ಪಾಲ್ಗೊಳ್ಳುತ್ತಾರೆ. ಈ ವರ್ಷ ನವೆಂಬರ್ 27 ರಂದು ನಂಕನ ಸಾಹಿಬ್ನಲ್ಲಿ ಆರಂಭವಾಗುವ ಗುರು ನಾನಕರ ಜಯಂತಿಯಲ್ಲಿ ಪಾಲ್ಗೊಳ್ಳಲು ಭಾರತೀಯ ಸಿಖ್ ಯಾತ್ರಿಕರಿಗೆ ಪಾಕಿಸ್ತಾನ ಐದು ದಿನಗಳ ವೀಸಾ ನೀಡಲು ಮುಂದಾಗಿರುವದಾಗಿ ತಿಳಿದುಬಂದಿದೆ.