Job Description: ಕೇರಳ ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ಜಲ ಟ್ಯಾಕ್ಸಿ ಸೇವೆ ಆರಂಭಿಸಲಾಗಿದ್ದು, ಅಲಪ್ಪುಳದ ಹಿನ್ನೀರಿನಲ್ಲಿ ಈ ಸೇವೆ ಆರಂಭವಾಗಿದೆ. ಕೇರಳ ರಾಜ್ಯ ಜಲ ಸಾರಿಗೆ ಇಲಾಖೆಯು (SWTD) ಆರಂಭಿಸಲು ಉದ್ದೇಶಿಸಿರುವ ನಾಲ್ಕು ದೋಣಿ ಸಂಚಾರ ಸರಣಿಯಲ್ಲಿ ಇದು ಮೊದಲನೆಯದಾಗಿದೆ. ಕೇರಳದಲ್ಲಿ ಅಲಪ್ಪುಳ ಹಿನ್ನೀರು ಪ್ರಮುಖ ಪ್ರವಾಸಿ ಸ್ಥಳವಾಗಿದ್ದು, ಕೇರಳದ ಈ ಜಲ ಟ್ಯಾಕ್ಸಿ ಸೇವೆಯು ರಾಜ್ಯದ ಪ್ರವಾಸೋದ್ಯಮಕ್ಕೆ ಆರ್ಥಿಕ ಬಲ ನೀಡಲಿದೆ.