Job Description: ನವದೆಹಲಿ : 'ಜಾಗತಿಕ ಹಸಿವು ದಿನ'ವಾದ ಅಕ್ಟೋಬರ್ 16 ರಂದು ಜಾಗತಿಕ ಹಸಿವು ಸೂಚ್ಯಂಕ ಪ್ರಕಟಗೊಂಡಿದ್ದು, ಭಾರತವು 94ನೇ ಸ್ಥಾನವನ್ನು ಪಡೆದಿದೆ. ಕಳೆದ ವರ್ಷದ ಹಸಿವು ಸೂಚ್ಯಂಕದಲ್ಲಿ ಭಾರತವು 102ನೇ ಸ್ಥಾನವನ್ನು ಪಡೆದಿತ್ತು, ಆದರೆ ಈ ವರ್ಷ 8 ಸ್ಥಾನಗಳ ಏರಿಕೆ ಕಂಡಿದೆ. * ಈ ವರ್ಷ 132 ದೇಶಗಳ ಹಸಿವಿನ ಹಾಗೂ ಅಪೌಷ್ಟಿಕತೆಯ ದತ್ತಾಂಶಗಳನ್ನು ಸಂಗ್ರಹಿಸಲಾಗಿತ್ತಾದರೂ, ಈ ಸೂಚ್ಯಂಕದಲ್ಲಿ 107 ದೇಶಗಳಲ್ಲಿನ ಹಸಿವಿನ ಪ್ರಮಾಣ ಹಾಗೂ ಅಪೌಷ್ಟಿಕತೆಯ ಪ್ರಮಾಣದ ವಿವರಗಳನ್ನು ಮಾತ್ರ ನೀಡಲಾಗಿದೆ. * ಮಕ್ಕಳ ದೇಹತೂಕದ ಪ್ರಮಾಣದಲ್ಲೂ ಭಾರತದ ಸಾಧನೆ ಅತ್ಯಂತ ಕಳಪೆಯಾಗಿದ್ದು ಇದು ಶೇ.17.3 ಆಗಿದೆ. * ಭಾರತದಲ್ಲಿ ಶೇ. 37.4ರಷ್ಟು ಮಕ್ಕಳು ಕುಂಠಿತವಾದ ದೇಹವುಳ್ಳವರಾಗಿದ್ದರೆಂದು ಸೂಚ್ಯಂಕ ತಿಳಿಸಿದೆ. * ಭಾರತದ ನೆರೆಯ ಬಾಂಗ್ಲಾದೇಶ 75ನೇ ಸ್ಥಾನ, ಮ್ಯಾನ್ಮಾರ್ 78 ಮತ್ತು ಪಾಕಿಸ್ತಾನ 88ನೇ ಸ್ಥಾನ, ನೇಪಾಳ 73ನೇ ಸ್ಥಾನ, ಶ್ರೀಲಂಕಾ 64ನೇ ಸ್ಥಾನ ಪಡೆದಿದೆ. * ಚೀನಾ, ಬೆಲಾರಸ್, ಉಕ್ರೇನ್, ಟರ್ಕಿ, ಕ್ಯೂಬಾ ಮತ್ತು ಕುವೈತ್ ಸೇರಿದಂತೆ 17 ರಾಷ್ಟ್ರಗಳು ಜಾಗತಿಕ ಹಸಿವು ಸೂಚ್ಯಂಕದಲ್ಲಿ ಅಗ್ರ ಸ್ಥಾನವನ್ನು ಪಡೆದಿವೆ.