Job Description: ಭುವನೇಶ್ವರ್ : ಭಾರತೀಯ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ದೇಶೀಯ ತಂತ್ರಜ್ಞಾನ ಬಳಸಿಕೊಂಡು ತಯಾರಿಸಲಾಗಿರುವ "ಪೃಥ್ವಿ-2" ಕ್ಷಿಪಣಿ ಪರೀಕ್ಷಾರ್ಥ ಪ್ರಯೋಗವು ಒಡಿಶಾದ ಬಾಲಾಸೋರ್ ಕರಾವಳಿ ತೀರದಲ್ಲಿರುವ ಉಡಾವಣಾ ಕೇಂದ್ರದಿಂದ ನಡೆಸಲಾಗಿದ್ದು, ಈ ಪ್ರಯೋಗವು ಯಶಸ್ವಿಯಾಗಿದೆ ಎಂದು ಮೂಲಗಳು ಖಚಿತ ಪಡಿಸಿವೆ. * "ಪೃಥ್ವಿ 2" ಕ್ಷಿಪಣಿಯು 250 ಕಿ.ಮೀ ದೂರ ಕ್ರಮಿಸಬಲ್ಲದು * ಇದೊಂದು ಅಣ್ವಸ್ತ್ರ ಸಿಡಿತಲೆ ಸಹಿತ ಕ್ಷಿಪಣಿಯಾಗಿದ್ದು, 1 ಟನ್ ಅಣ್ವಸ್ತ್ರ ಸಿಡಿತಲೆಯನ್ನು ಸಾಗಿಸುವ ಸಾಮರ್ಥ್ಯವನ್ನು ಹೊಂದಿದೆ.