Job Description: ನವದೆಹಲಿ : ಫ್ರಾನ್ಸ್ ದೇಶವು ಭಾರತದೊಂದಿಗಿನ ಒಪ್ಪಂದದ ಪ್ರಕಾರ ಈಗಾಗಲೇ ಮೊದಲನೇ ಹಂತದ ರಫೆಲ್ ಯುದ್ಧ ವಿಮಾನಗಳನ್ನು ಪೂರೈಸಿದ್ದು, ಇದೀಗ ಎರಡನೇ ಹಂತದಲ್ಲಿ 3 ರಿಂದ 4 ರಫೆಲ್ ಜೆಟ್ ಗಳು ಶೀಘ್ರದಲ್ಲೇ ಭಾರತಕ್ಕೆ ಆಗಮಿಸಲಿವೆ. ಈ ವಿಮಾನಗಳು ಹರಿಯಾಣದ ಅಂಬಾಲಾದಲ್ಲಿರುವ ವಾಯುನೆಲೆಗೆ ನವೆಂಬರ್ ಮೊದಲ ವಾರದಲ್ಲಿ ಬಂದು ತಲುಪುವ ನಿರೀಕ್ಷೆಯಿದೆ. * ಭಾರತವು ಒಟ್ಟು 36 ರಫೆಲ್ ಜೆಟ್ ಯುದ್ಧ ವಿಮಾನಗಳ ಖರೀದಿಗೆ ಫ್ರಾನ್ಸ್ ಒಪ್ಪಂದಮಾಡಿಕೊಂಡಿದೆ. * ಐದು ವಿಮಾನಗಳು ಮೊದಲ ಬ್ಯಾಚ್ನಲ್ಲಿ ಜುಲೈ 28ರಂದು ಭಾರತಕ್ಕೆ ತಲುಪಿದ್ದು, ಸೆಪ್ಟೆಂಬರ್ 10ರಂದು ವಾಯುಪಡೆಗೆ ಅಧಿಕೃತವಾಗಿ ಸೇರ್ಪಡೆಗೊಳಿಸಲಾಗಿದೆ. * ರಫೇಲ್ ಯುದ್ಧ ವಿಮಾನ ಹಾರಿಸಲಿರುವ ಮೊದಲ ಮಹಿಳಾ ಪೈಲಟ್ ಶಿವಾಂಗಿ