Job Description: ಕೋಲಾರ : ಕನ್ನಡ ಚಿತ್ರರಂಗದ ನಟರಾಗಿರುವ ಡಾ.ಎ.ವಿ ರವಿ ಅವರು ಮದರ್ ಥೆರೇಸಾ ರಾಷ್ಟ್ರೀಯ ಪ್ರಶಸ್ತಿ ಗೆ ಆಯ್ಕೆಯಾಗಿದ್ದಾರೆ. ಇವರು ಈಗಾಗಲೇ ಮಿ.ಇಂಡಿಯಾ, ಏಕಲವ್ಯ ಪ್ರಶಸ್ತಿ ಸೇರಿ ಹಲವು ಪುರಸ್ಕಾರಗಳನ್ನು ಪಡೆದಿರುತ್ತಾರೆ. ಅಂತರಾಷ್ಟ್ರೀಯ ದೇಹದಾಢ್ರ್ಯ ಪಟುವಾಗಿರುವ ಇವರು ಕರ್ನಾಟಕ ಜಿಮ್ ಮತ್ತು ಪಿಟ್ನೆಸ್ ಮಾಲೀಕರ ಸಂಘದ ರಾಜ್ಯಾಧ್ಯಕ್ಷ ಕೂಡ ಆಗಿದ್ದಾರೆ. * ಮದರ್ ಥೆರೇಸಾ ರಾಷ್ಟ್ರೀಯ ಪ್ರಶಸ್ತಿ ಯನ್ನು "ದಿ ನ್ಯಾಷನಲ್ ಕ್ರಿಸ್ ಕೌನ್ಸಿಲ್ ಆಫ್ ಇಂಡಿಯಾ" ಹಾಗೂ "ದಿ ನ್ಯೂಸ್ ಪೇಪರ್ಸ್ ಅಸೋಸಿಯೇಷನ್ ಆಫ್ ಕರ್ನಾಟಕ" ಸಂಸ್ಥೆಗಳು ಜಂಟಿಯಾಗಿ ಈ ಪ್ರಶಸ್ತಿ ಪ್ರದಾನ ಮಾಡಲಿವೆ.