Job Description: ಪ್ಯಾರಿಸ್: ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯಲ್ಲಿ ಸ್ಪೇನ್ನ ರಫೆಲ್ ನಡಾಲ್ ಅವರು ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಈ ಮೂಲಕ ಅವರು ಒಟ್ಟು 13ನೇ ಬಾರಿ ಫ್ರೆಂಚ್ ಓಪನ್ ಟೆನಿಸ್ ಟೂರ್ನಿ ಚಾಂಪಿಯನ್ ಎನಿಸಿಕೊಂಡರು. ದಿನಾಂಕ 11 ಅಕ್ಟೋಬರ್ 2020 ರಂದು ನಡೆದ ಫೈನಲ್ ಪಂದ್ಯದಲ್ಲಿ 6-0, 6-2, 7-5 ಅಂಕಗಳಿಂದ ನೊವಾಕ್ ಜೊಕೊವಿಚ್ ಅವರ ವಿರುದ್ಧ ಜಯಗಳಿಸಿದರು. * ಈ ಗೆಲುವಿನ ಮೂಲಕ ನಡಾಲ್ ಅವರು ಸ್ವಿಟ್ಜರ್ಲೆಂಡ್ನ ದಿಗ್ಗಜ ರೋಜರ್ ಫೆಡರರ್ ಅವರ 20 ಗ್ರ್ಯಾನ್ಸ್ಲಾಂ ಜಯದ ದಾಖಲೆಯನ್ನು ಸರಿಗಟ್ಟಿದರು. * ನಡಾಲ್ ಅವರಿಗೆ ಫ್ರೆಂಚ್ ಓಪನ್ನಲ್ಲಿ ನೂರನೇ ಗೆಲುವು ಆಗಿರುವುದು ಮತ್ತೊಂದು ವಿಶೇಷ.