Job Description: ರಾಜ್ಯದ ಕರಾವಳಿಯುದ್ದಕ್ಕೂ ವ್ಯಾಪಿಸಿರುವ ಪಶ್ಚಿಮ ಘಟ್ಟಗಳು ವಿಶ್ವದಲ್ಲೇ ಅತ್ಯಂತ ಹೆಚ್ಚಿನ ಜೀವವೈವಿಧ್ಯ ಹೊಂದಿರುವ ತಾಣವಾಗಿ ಗುರುತಿಸಿಕೊಂಡಿವೆ. ಇದೀಗ ಪಶ್ಚಿಮಘಟ್ಟ ಪರ್ವತ ಶ್ರೇಣಿಗಳ ಕರ್ನಾಟಕ ವಲಯದಲ್ಲಿ ಮತ್ತೊಂದು ಹೊಸ ಸಸ್ಯ ಪ್ರಭೇದವನ್ನು ವಿಜ್ಞಾನಿಗಳು ಗುರುತಿಸಿದ್ದಾರೆ. ಈ ಸಸ್ಯ ಪ್ರಭೇದವು ಪಶ್ಚಿಮಘಟ್ಟದ ಉತ್ತರ ಕನ್ನಡ ಜಿಲ್ಲೆ ಕುಮಟಾ ಭಾಗದ ಲ್ಯಾಟರೈಟ್ ಕಲ್ಲುಗಳ ಮೇಲೆ ಪತ್ತೆಯಾಗಿದ್ದು, ಕರ್ನಾಟಕದ 'ಕರಾವಳಿ' ಹೋಲುವ 'ಎರಿಯೋಕಾಲನ್ ಕರಾವಲೆನ್ಸ್' ಎಂದು ನಾಮಕರಣ ಮಾಡಲಾಗಿದೆ. ಇದುವರೆಗೆ ಒಟ್ಟು 1,814 ಹೂಬಿಡದ ಪ್ರಭೇದಗಳನ್ನು ಒಳಗೊಂಡಿದ್ದ ಪಶ್ಚಿಮಘಟ್ಟಕ್ಕೆ ಪ್ರದೇಶಕ್ಕೀಗ ಹೊಸ ಪ್ರಭೇದ ಸೇರ್ಪಡೆಯಾಗಿದೆ.