Job Description: ಮಂಗಳೂರು ಜಿಲ್ಲೆ ಪುತ್ತೂರಿನ ಶಿವರಾಮ ಕಾರಂತ ಬಾಲವನ ಪ್ರತಿಷ್ಠಾನದಿಂದ ಪ್ರತಿವರ್ಷ ಕೊಡಮಾಡುವ 2020ನೇ ಸಾಲಿನ ಶಿವರಾಮ ಕಾರಂತ ಬಾಲವನ ಪ್ರಶಸ್ತಿಗೆ ಹಿರಿಯ ಸಾಹಿತಿ, ಸಂಶೋಧಕ, ಪ್ರಸಂಗಕರ್ತ ಪ್ರೊ.ಅಮೃತ ಸೋಮೇಶ್ವರವರನ್ನು ಆಯ್ಕೆ ಮಾಡಲಾಗಿದೆ. ಡಾ.ಶಿವರಾಮ ಕಾರಂತರ ಜನ್ಮ ದಿನಾಚರಣೆಯ ಪ್ರಯುಕ್ತ, ಪ್ರಶಸ್ತಿ ಪ್ರದಾನ ಸಮಾರಂಭವು ಇದೆ ಅಕ್ಟೋಬರ್ 10ರಂದು ಪುತ್ತೂರಿನ ಬಾಲವನದಲ್ಲಿ ನಡೆಯಲಿದ್ದು, ಸೋಮೇಶ್ವರ ಅವರಿಗೆ ಪ್ರಶಸ್ತಿ ಪ್ರಧಾನ ಮಾಡಲಾಗುವದು. * ಪ್ರಶಸ್ತಿಯು ₹25 ಸಾವಿರ ನಗದು, ಫಲಕ, ಪ್ರಮಾಣ ಪತ್ರ, ಶಾಲು, ಹಾರಗಳನ್ನು ಒಳಗೊಂಡಿದೆ.