Job Description: ಜಗತ್ತಿನಲ್ಲಿಯೇ ಅತೀ ಎತ್ತರದ ಸುರಂಗ ಎಂಬ ಖ್ಯಾತಿಗೆ ಪಾತ್ರವಾದ ಶಿಮ್ಲಾ ಸಮೀಪ ನಿರ್ಮಿಸಿರುವ ಒಟ್ಟು 9.02 ಕಿ.ಮೀ ಉದ್ದದ ಅಟಲ್ ಸುರಂಗ ಹೆದ್ದಾರಿ ಮಾರ್ಗವನ್ನು ಇದೆ ಅಕ್ಟೋಬರ್ 03 ರಂದು ಪ್ರಧಾನಿ ನರೇಂದ್ರ ಮೋದಿಯವರು ಉದ್ಘಾಟಿಸಿದರು. * ಈ ಸುರಂಗ ಹೆದ್ದಾರಿಯು ಮನಾಲಿ ಹಾಗೂ ಲಹೌಲ್ ಸ್ಪಿತಿ ಕಣಿಯನ್ನು ವರ್ಷದ ಎಲ್ಲ ದಿನಗಳಲ್ಲಿಯೂ ಸಂಪರ್ಕಿಸಲಿದೆ. * ಈ ಸುರಂಗವನ್ನು ಸಮುದ್ರ ಮಟ್ಟದಿಂದ ಸರಾಸರಿ 3,000 ಮೀಟರ್ (10,000 ಅಡಿ) ಎತ್ತರದಲ್ಲಿ ನಿರ್ಮಿಸಲಾಗಿದೆ. * ಸುರಂಗದಲ್ಲಿ 5.525 ಮೀಟರ್ ಎತ್ತರದವರೆಗಿನ ವಾಹನಗಳ ಓಡಾಟಕ್ಕೆ ಅವಕಾಶವಿದೆ. * ಸುರಂಗದಲ್ಲಿ ಹಲವು ಆಧುನಿಕ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ ಪ್ರಮುಖವಾಗಿ - ಎರಡೂ ಬದಿಗಳಲ್ಲಿ ಪ್ರವೇಶ ನಿರ್ಬಂಧ. - ತುರ್ತು ಸಂಪರ್ಕಕ್ಕಾಗಿ ದೂರವಾಣಿ ಸಂಪರ್ಕ ಸೇವೆ. - ಪ್ರತಿ 60 ಮೀಟರಿಗೊಂದರಂತೆ ಅಗ್ನಿಶಾಮಕ ವ್ಯವಸ್ಥೆ. - ಪ್ರತಿ 250 ಮೀಟರ್ ಗೆ ಒಂದರಂತೆ ಸಿಸಿಟಿವಿ ಕ್ಯಾಮೆರಾ ಸೇರಿ ಹಲವು ಸುರಕ್ಷಾ ಕ್ರಮಗಳನ್ನ ಕೈಗೊಳ್ಳಲಾಯಿದೆ.