Job Description: ವಾಷಿಂಗ್ಟನ್ : ಭಾರತದ C-130 J ಸೂಪರ್ ಹರ್ಕ್ಯುಲಸ್ ಸರಕು ವಿಮಾನಗಳಿಗೆ ಬೇಕಾಗಿರುವ ಸುಮಾರು ₹62.43 ಕೋಟಿ ಮೌಲ್ಯದ ಬಿಡಿಭಾಗ ಸೇರಿ ವಿವಿಧ ಉಪಕರಣಗಳ ಖರೀದಿಗಾಗಿ ಭಾರತವು ಅಮೆರಿಕಾಕಕ್ಕೆ ಮಡಿದ ಮನವಿಗೆ ಅಮೆರಿಕಾವು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಶೀಘ್ರದಲ್ಲಿ ಈ ಉಪಕರಣಗಳನ್ನು ಭಾರತಕ್ಕೆ ಪೂರೈಸಲಿದೆ. ಈ ಒಪ್ಪಂದದ ಮೂಲಕ ಉಭಯ ರಾಷ್ಟ್ರಗಳ ರಕ್ಷಣಾ ಕ್ಷೆತ್ರದ ಪರಸ್ಪರ ಸಹಕಾರ ಮತ್ತಷ್ಟು ಉತ್ತಮಗೊಳ್ಳಲಿದೆ ಎಂದು ರಕ್ಷಣಾ ಭದ್ರತಾ ಸಹಕಾರ ಸಂಸ್ಥೆಯು ಅಮೆರಿಕ ಸಂಸತ್ತಿಗೆ ನೀಡಿದ ಅಧಿಸೂಚನೆಯಲ್ಲಿ ಮಾಹಿತಿ ನೀಡಿದೆ. * ಅಮೆರಿಕವು ಸಿ -130 ಜೆ ಸೂಪರ್ ಹರ್ಕ್ಯುಲಸ್ ಸರಕು ವಿಮಾನಗಳನ್ನೂ ಒಟ್ಟು 17 ರಾಷ್ಟ್ರಗಳಿಗೆ ಮಾರಾಟ ಮಾಡಿದ್ದು, ಇದರಲ್ಲಿ ಭಾರತವು ಕೂಡ ಒಂದು.