Job Description: ನವದೆಹಲಿ: ಅಕ್ಟೋಬರ್ 02 ರಂದು ದೇಶ್ಯಾದ್ಯಂತ ರಾಷ್ಟ್ರಪಿತ ಮಹಾತ್ಮ ಗಾಂಧಿಯವರ 151 ನೇ ಹಾಗೂ ಮಾಜಿ ಪ್ರಧಾನಿಯಾದ ಲಾಲ್ ಬಹದ್ದೂರ್ ಶಾಸ್ತ್ರಿ ಅವರ 116ನೇ ಜನ್ಮದಿನವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಇನ್ನು ದೆಹಲಿಯಲ್ಲಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮಹಾತ್ಮ ಗಾಂಧಿ ಸ್ಮಾರಕ ರಾಜ್ ಘಾಟ್ ಮತ್ತು ಶಾಸ್ತ್ರೀ ಸ್ಮಾರಕವಿರುವ ವಿಜಯ್ ಘಾಟ್ ಸ್ಥಳಗಳಿಗೆ ತೆರಳಿ ಬಾಪು ಹಾಗೂ ಶಾಸ್ತ್ರೀಜಿಯವರಿಗೆ ಗೌರವ ಸಮರ್ಪಿಸಿದರು.