Job Description: ಜಗತ್ತಿನಾದ್ಯಂತ ಕೊರೊನಾ ಕಾರಣಕ್ಕೆ ಬಹುತೇಕ ರಾಷ್ಟ್ರಗಳು ಲಾಕ್ ಡೌನ್ ಘೋಷಿಸಿದ್ದವು ಈ ಹಿನ್ನಲೆ ಹಲವು ರಾಷ್ಟ್ರಗಳು ಹಾಗೂ ಉದ್ಯಮಗಳು ತೀವ್ರ ಆರ್ಥಿಕ ನಷ್ಟವನ್ನು ಅನುಭವಿಸಿದ್ದರು. ಆದರೆ ಭಾರತದ ಅತಿ ಶ್ರೀಮಂತ ಹಾಗೂ ರಿಲಯನ್ಸ್ ಸಮೂಹದ ಮುಖ್ಯಸ್ಥ ಮುಕೇಶ್ ಅಂಬಾನಿಯವರು ಲಾಕ್ ಡೌನ್ ಅವಧಿಯಲ್ಲಿ ಗಂಟೆಗೆ ಅಂದಾಜು 90 ಕೋಟಿ ಯಷ್ಟು ಗಳಿಕೆ ಮಾಡಿದ್ದು, ಅಲ್ಲದೆ ರಿಲಯನ್ಸ್ ಇಂಡಸ್ಟ್ರೀಸ್ ಆಸ್ತಿಯ ಒಟ್ಟು ಮೌಲ್ಯ ಶೇಕಡ 73 ರಷ್ಟು ಏರಿಕೆಯಾಗಿ ಈಗ 6.59 ಲಕ್ಷ ಕೋಟಿ ರೂಪಾಯಿಗೆ ತಲುಪಿರುವದಾಗಿ ಇತ್ತೀಚಿಗೆ ವರದಿಯಾಗಿದೆ.