Job Description: ವಿಶ್ವದ ಪ್ರಮುಖ ಕೆಲವೇ ಕೆಲವು ಬಾಹ್ಯಾಕಾಶ ಸಂಸ್ಥೆಗಳ ಪೈಕಿ ಹೆಸರು ಪಡೆದಿರುವ ಭಾರತೀಯ ಬಾಹ್ಯಾಕಾಶ ಸಂಸ್ಥೆ ಈಗಾಗಲೇ ಹಲವು ಸಾಧನೆಗಳೊಂದಿಗೆ ವಿಶ್ವದ ಗಮನ ಸೆಳೆದಿದೆ, ಇದೀಗ ಈ ಸಾಧನೆಗಳ ಪಟ್ಟಿಗೆ ಹೊಸ ಸೇರ್ಪಡೆ ಎಂಬಂತೆ 2025 ಕ್ಕೆ ಶುಕ್ರ ಗ್ರಹಕ್ಕೆ ಫ್ರಾನ್ಸ್ ರಾಷ್ಟ್ರದ ಸಹಯೋಗದೊಂದಿಗೆ ನೌಕೆ ಉಡಾಯಿಸಲು ಯೋಜನೆ ರೂಪಿಸಿರುವದಾಗಿ ತಿಳಿದು ಬಂದಿದೆ. ಗಾತ್ರ, ರಚನೆ, ಹಾಗೂ ಗುರುತ್ವ ಬಲಗಳಲ್ಲಿ ಬಹುತೇಕ ಭೂಮಿಯ ಹೋಲುವ ಗ್ರಹ ಇದಾಗಿದೆ. ಇದೆ ಕಾರಣದಿಂದ ISRO ಸಂಸ್ಥೆ ಈ ಗ್ರಹದ ಅಧ್ಯಯನಕ್ಕೆ 2025 ರಲ್ಲಿ ನೂತನ ಯೋಜನೆ ಕೈಗೊಂಡಿರುವದಾಗಿ ತಿಳಿದುಬಂದಿದೆ.