Job Description: ನವದೆಹಲಿ : ಸುಮಾರು 400 ಕಿಲೋ ಮೀಟರ್ ಗೂ ಮೀರಿದ ಗುರಿಯನ್ನು ತಲುಪಿ ಹೊಡೆದುರುಳಿಸಬಲ್ಲ ಸಾಮರ್ಥ್ಯ ಹೊಂದಿದ ಬ್ರಹ್ಮೋಸ್ ಸೂಪರ್ಸಾನಿಕ್ ಕ್ರೂಸ್ ಕ್ಷಿಪಣಿಯ ಎರಡನೆಯ ಆವೃತ್ತಿಯ ಪರೀಕ್ಷೆ ಯಾಶಸ್ವಿಯಾಗಿದೆ. * ರಷ್ಯಾ ಹಾಗೂ ಭಾರತ ರಾಷ್ಟ್ರಗಳು ಜಂಟಿಯಾಗಿ ಅಭಿವೃದ್ಧಿ ಪಡಿಸಿದ ಬ್ರಹ್ಮೋಸ್ ಕ್ಷಿಪಣಿಯ ಮೊದಲನೆಯ ಆವೃತ್ತಿಯು 290 ಕಿ.ಮೀ ಸಂಚರಿಸುವ ಸಾಮರ್ಥ್ಯ ಹೊಂದಿತ್ತು, ಆದರೆ ಇದೀಗ ಪರೀಕ್ಷೆಗೊಳಪಡಿಸಲಾದ ನೂತನ ಆವೃತ್ತಿ 400 ಕ್ಕೂ ಅಧಿಕ ಕಿಲೋ ಮೀಟರ್ ಗುರಿ ಭೇದಿಸಲಿದೆ. ಈ ಮೂಲಕ ಭಾರತೀಯ ರಕ್ಷಣಾ ಪಡೆಯ ಬಲ ಮತ್ತಷ್ಟು ಹಿರಿದಾಗಿದೆ. * ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಈ ಕ್ಷಿಪಣಿಗಳನ್ನು ತಯಾರಿಸಿದ್ದು, ಪ್ರಧಾನಿ ಮೋದಿ, ರಕ್ಷಣಾ ಸಚಿವರು ಸೇರಿ ಹಲವು ಗಣ್ಯರು ಅಭಿನಂದಿಸಿದ್ದಾರೆ.