Job Description: ಮುಂಬೈ : ಆಸ್ಟ್ರೇಲಿಯದ ಕ್ರಿಕೆಟ್ ನ ದಂತಕತೆಯೆನಿಸಿರುವ ಮಾಜಿ ಕ್ರಿಕೆಟ್ ಆಟಗಾರ ಡೀನ್ ಜೋನ್ಸ್ ಅವರು ತೀವ್ರ ಹೃದಯಾಘಾತದ ಕಾರಣ ಭಾರತದ ಮುಂಬೈ ನಗರದಲ್ಲಿ ತಮ್ಮ 59 ನೇ ವಯಸ್ಸಿನಲ್ಲಿ ನಿಧನರಾದರು. ಪ್ರಸ್ತುತ ಯುಎಇನಲ್ಲಿ ನಡೆಯುತ್ತಿರುವ ಐಪಿಎಲ್ ಟೂರ್ನಿಯ ಪ್ರಸಾರ ವೇಳೆ ಸ್ಟಾರ್ ಸ್ಪೋಟ್ಸ್ ನ ವೀಕ್ಷಕ ವಿವರಣೆಗಾಗಿ ಮುಂಬೈ ನಗರದಲ್ಲಿ ತಂಗಿದ್ದರು. - ಜೋನ್ಸ್ ಅವರು ಆಸ್ಟ್ರೇಲಿಯದ ಪರವಾಗಿ ಮಾಡಿದ ಸಾಧನೆ : * ಟೆಸ್ಟ್ ಪಂದ್ಯ : 52, ರನ್ ಗಳು :3,631, ಗರಿಷ್ಠ: 216 ರನ್, ಶತಕ : 11 * ಏಕದಿನ ಪಂದ್ಯ : 164, ರನ್ ಗಳು : 6,068, ಶತಕ: 7, ಅರ್ಧಶತಕ : 46