Job Description: ವಿಶ್ವಸಂಸ್ಥೆ: ಜಾಗತಿಕವಾಗಿ ವ್ಯಾಪಿಸಿರುವ ಕೋವಿಡ್-19 ಸಾಂಕ್ರಾಮಿಕದಿಂದಾಗಿ ಜಗತ್ತಿನ ಬಹುತೇಕ ಎಲ್ಲ ರಾಷ್ಟ್ರಗಳು ತೀವ್ರ ಆರ್ಥಿಕ ಸಮಸ್ಯೆ ಎದುರಿಸಬೇಕಾಯಿತು. ಅದೇ ರೀತಿ ಭಾರತದ ಆರ್ಥಿಕತೆಯು 2020ರಲ್ಲಿ ಶೇ.5.9ರಷ್ಟು ಸಂಕುಚಿತಗೊಳ್ಳಲಿದೆ ಎಂದು ವಿಶ್ವಸಂಸ್ಥೆಯ ವ್ಯಾಪಾರ ಮತ್ತು ಅಭಿವೃದ್ಧಿ ಘಟಕ (UNCTAD)ದ ವರದಿ ಮಾಡಿದೆ. ಇನ್ನು ಕೋವಿಡ್-19 ನಿಯಂತ್ರಣಕ್ಕೆ ಬಾರದ ಕಾರಣದಿಂದಾಗಿ ವಿಶ್ವ ಆರ್ಥಿಕತೆಯು ತೀವ್ರ ಹಿಂಜರಿತಕ್ಕೊಳಗಾಗಿದೆ ಎಂದು ವ್ಯಾಪಾರ ಮತ್ತು ಅಭಿವೃಧ್ಧಿ ವರದಿ-2020 ತಿಳಿಸಿದೆ.