Job Description: ಟೈಮ್ ಮ್ಯಾಗಝಿನ್ನ 'ಅತ್ಯಂತ ಹೆಚ್ಚು ಪ್ರಭಾವಶಾಲಿ ವ್ಯಕ್ತಿಗಳ' ಪಟ್ಟಿ ಪ್ರಕಟ ನವದೆಹಲಿ: ಟೈಮ್ ಮ್ಯಾಗಝಿನ್ನ 100 ''ಅತ್ಯಂತ ಹೆಚ್ಚು ಪ್ರಭಾವಶಾಲಿ ವ್ಯಕ್ತಿಗಳು-2020'' ಪಟ್ಟಿ ಪ್ರಕಟಗೊಂಡಿದ್ದು, ಈ ಪಟ್ಟಿಯಲ್ಲಿ ಮೂವರು ಭಾರತೀಯರು ಸ್ಥಾನ ಪಡೆದಿದ್ದು, ಅವರೆಂದರೆ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಲ್ಕಿಸ್ ಆಲಿಯಾಸ್ 'ಶಾಹೀನ್ಬಾಗ್ನ ದಾದಿ' ಹಾಗೂ ನಟ ಆಯುಷ್ಮಾನ್ ಖುರಾನಾ. * ಇತ್ತೀಚಿಗೆ ತಮ್ಮ 70 ನೇ ಜನ್ಮದಿನವನ್ನಾಚರಿಸಿಕೊಂಡ ಪ್ರಧಾನಿ ಮೋದಿ ಅವರು ನಾಯಕರ ಶ್ರೇಣಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. * ದಿಲ್ಲಿಯ ಶಾಹೀನ್ಬಾಗ್ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ನಡೆದ ಪ್ರತಿಭಟನೆಯ ಕೇಂದ್ರಬಿಂದುವಾಗಿದ್ದ 'ಶಾಹೀನ್ಬಾಗ್ನ ದಾದಿ' (ಅಜ್ಜಿ) ಸ್ಥಾನ ಪಡೆದಿದ್ದಾರೆ. * ತಮ್ಮ ನಟನೆಯ ಮೂಲಕ ಜನಪ್ರಿಯರಾಗಿರುವ ಬಾಲಿವುಡ್ ನಟ ಆಯುಷ್ಮಾನ್ ಖುರಾನಾ ಅವರು ಟೈಮ್ಸ್ ನ ಪ್ರಭಾವಿಯಾಗಿದ್ದರೆ. * ಗೂಗಲ್ ಸಿಇಒ ಸುಂದರ್ ಪಿಚಾ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಅಮೆರಿಕದ ಡೆಮಾಕ್ರೆಟಿಕ್ ಪಕ್ಷದ ಉಪ ಅಧ್ಯಕ್ಷೀಯ ಅಭ್ಯರ್ಥಿ ಕಮಲಾ ಹ್ಯಾರಿಸ್, ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಹಾಗೂ ಅಧ್ಯಾಪಕ ರವೀಂದ್ರ ಗುಪ್ತಾ ಸೇರಿದಂತೆ ಹಲವರು ಟೈಮ್ ಮ್ಯಾಗಝಿನ್ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.