Job Description: ನವದೆಹಲಿ: ಕರ್ನಾಟಕ ರಾಜ್ಯದ ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ವಿಜಯಸಾಧಿಸಿ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟದಲ್ಲಿ ಸಚಿವರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸುರೇಶ್ ಚನ್ನಬಸಪ್ಪ ಅಂಗಡಿ ಅವರು ದಿನಾಂಕ 23 ಸೆಪ್ಟೆಂಬರ್ 2020 ರಂದು ಕೋರೋಣ ಸೋಂಕಿನ ಕಾರಣದಿಂದ ತಮ್ಮ 65 ನೇ ವಯಸ್ಸಿನಲ್ಲಿ, ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು. * ಇವರು ಕೇಂದ್ರ ಸರ್ಕಾರದಲ್ಲಿ ರೈಲ್ವೆ ಇಲಾಖೆ ರಾಜ್ಯ ಸಚಿವರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. * 4 ಬಾರಿ ಲೋಕಸಭೆ ಸಂಸದರಾಗಿ ಸುರೇಶ್ ಅಂಗಡಿ ಆಯ್ಕೆಯಾಗಿದ್ದರು. 2004, 2009, 2014 ಮತ್ತು 2019ರಲ್ಲಿ ಲೋಕಸಭೆ ಚುನಾವಣೆಯಲ್ಲಿ ಗೆದ್ದಿದ್ದರು. * ಸುರೇಶ್ ರವರು ಸೋಮವ್ವ ಮತ್ತು ಚೆನ್ನಬಸಪ್ಪ ಅಂಗಡಿ ದಂಪತಿಗೆ 1955 ಜೂನ್ 1 ಬೆಳಗಾವಿ ಜಿಲ್ಲೆಯ ಬೆಳಗಾವಿ ತಾಲ್ಲೂಕಿನ ಕೆ.ಕೆ. ಕೊಪ್ಪಾ ಗ್ರಾಮದಲ್ಲಿ ಜನಿಸಿದರು. * ರಾಜಕೀಯ ಜೀವನಕ್ಕೂ ಮುನ್ನ ತಮ್ಮದೇ ಆದ ಸಿಮೆಂಟ್ ಉದ್ಯಮವನ್ನು ನಡೆಸುತ್ತಿದ್ದರು.