Job Description: ಲಖನೌ : ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರಪ್ರದೇಶ ಸರ್ಕಾರವು ಸೆಕ್ಸ್ ಸಂಬಂಧಿತ ಅಪರಾಧಗಳನ್ನು ತಡೆಯುವ ನಿಟ್ಟಿನಲ್ಲಿ 'ಆಪರೇಶನ್ ದುರಾಚಾರಿ' ಎಂಬ ಕಾರ್ಯಾಚರಣೆ ಆರಂಭಿಸಿದೆ. * ಈ ಕಾರ್ಯಾಚರಣೆಯ ಮೂಲಕ ಮಹಿಳೆಯರ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯ, ಅತ್ಯಾಚಾರ ಆರೋಪದಡಿಯಲ್ಲಿ ಸಿಕ್ಕಿಬಿದ್ದ ಆರೋಪಿಗಳ ಫೋಟೊ, ಮಾಡಿದ ಅಪರಾಧದ ಉಲ್ಲೇಖ ಇರುವ ದೊಡ್ಡ ಪೋಸ್ಟರ್ಗಳನ್ನು ರಸ್ತೆಗಳ ಪಕ್ಕದಲ್ಲಿ ಹಾಕಲಾಗುವುದು ಈ ಮೂಲಕ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ನಡೆಸುವ ಆರೋಪಿಗಳ ಮಾನ ಕಳೆಯುವುದು, ತನ್ಮೂಲಕ ಅವರಿಗೆ ಪಾಠ ಕಲಿಸುವುದೇ ಈ ಕಾರ್ಯಾಚರಣೆಯ ಉದ್ದೇಶವಾಗಿದೆ.