Job Description: ನವದೆಹಲಿ : ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ದಿಂದ ನಿರ್ಮಿತ ಹೈ-ಸ್ಪೀಡ್ ಎಕ್ಸ್ ಪೆಂಡೆಬಲ್ ಏರಿಯಲ್ ಟಾರ್ಗೆಟ್ (ಹೀಟ್) ಕ್ಷಿಪಣಿಯನ್ನು ಒಡಿಶಾದ ಐಟಿಆರ್ ಬಾಲಸೋರನಿಂದ ಯಶಸ್ವಿ ಹಾರಾಟ ಪರೀಕ್ಷೆ ನಡೆಸಲಾಯಿತು ಈ ಮೂಲಕ ಭಾರತದ ರಕ್ಷಣಾ ವಲಯವು ಮತ್ತೊಂದು ಐತಿಹಾಸಿದ ಮೈಲುಗಲ್ಲು ಸಾಧಿಸಿದೆ. * ಸಂಪೂರ್ಣ ದೇಶಿಯ ತಂತ್ರಜ್ಞಾನವನ್ನು ಬಳಸಿ ಈ ಕ್ಷಿಪಣಿಯನ್ನು ಅಭಿವೃದ್ಧಿ ಪಡಿಸಲಾಗಿದೆ. ಪರೀಕ್ಷೆಯ ಸಂದರ್ಭದಲ್ಲಿ 5 ಕಿ.ಮೀ ಹಾರಾಟದ ಎತ್ತರ, 0.5 ಹೆಚ್ಚಿನ ವಾಹನದ ವೇಗ, 30 ನಿಮಿಷಗಳ ಸಹಿಷ್ಣುತೆ ಮತ್ತು 2g ಟರ್ನ್ ಸಾಮರ್ಥ್ಯವನ್ನು ಯಶಸ್ವಿಯಾಗಿ ಸಾಧಿಸಲಾಯಿತು.