Job Description: ನವದೆಹಲಿ: ಪೂರ್ವ ಹಿಂದೂ ಮಹಾಸಾಗರದಲ್ಲಿ ಆಸ್ಟ್ರೇಲಿಯಾ ದೇಶದೊಂದಿಗೆ ಭಾರತವು ಎರಡು ದಿನಗಳ ನೌಕಾ ಸಮರಾಭ್ಯಾಸ ನಡೆಸಲು ಸಿದ್ಧತೆ ನಡೆಸಿದೆ. ಇದೇ ಸೆಪ್ಟೆಂಬರ್ 23 ಮತ್ತು 24 ರಂದು ಭಾರತ ಹಾಗೂ ಆಸ್ಟ್ರೇಲಿಯಾ ನೌಕಾಸೇನೆ ಸಮರಾಭ್ಯಾಸದಲ್ಲಿ ನಿರತವಾಗಲಿವೆ. ನೌಕಾಪಡೆಯ ಹೆಲಿಕಾಪ್ಟರ್ಗಳೂ ಕೂಡ ಈ ವ್ಯಾಯಾಮದಲ್ಲಿ ಭಾಗಿಯಾಗಲಿವೆ. ಇತ್ತೀಚಿಗೆ ಹಿಂದೂ ಮಹಾಸಾಗರದಲ್ಲಿ ಅಮೆರಿಕ ಮತ್ತು ಜಪಾನ್ನೊಂದಿಗೆ ಇದೇ ರೀತಿಯ ನೌಕಾ ಸಮರಾಭ್ಯಾಸವನ್ನು ಭಾರತ ನಡೆಸಿತ್ತು. ಇದೀಗ ಮತ್ತೆ ಆಸ್ಟ್ರೇಲಿಯಾ ದೇಶದೊಂದಿಗೆ ನೌಕಾ ಸಮರಾಭ್ಯಾಸ ನಡೆಸಲು ಸಿದ್ಧತೆ ನಡೆಸಿರುವುದು ಭಾರತದ ನೌಕಾಬಲದ ಹೆಚ್ಚುವರಿ ಕಾರ್ಯತಂತ್ರದ ಸಂಕೇತ ಎಂದು ಮಿಲಿಟರಿ ತಜ್ಞರು ಬಣ್ಣಿಸಿದ್ದಾರೆ.