Job Description: ಬೆಂಗಳೂರು : ಕರ್ನಾಟಕದ ಮೊಟ್ಟ ಮೊದಲ ಕಿಸಾನ್ ರೈಲು ಇದೇ ಸೆಪ್ಟೆಂಬರ್ 19 ರಿಂದ ಸಂಚಾರ ಆರಂಭಿಸುವ ನಿರೀಕ್ಷೆ ಇದೆ. ಭಾರತ ಸರ್ಕಾರವು 2020-21 ರ ಆಯವ್ಯಯದಲ್ಲಿ ತಿಳಿಸಿರುವಂತೆ ಈ ರೈಲಿನಲ್ಲಿ ಹಾಲು, ಮಾಂಸ, ಮೀನು ಸೇರಿ ಬೇಗ ಕೆಡಬಹುದಾಗ ಆಹಾರ ಉತ್ಪನ್ನಗಳನ್ನು ದೇಶದ ಮೂಲೆಗಳಿಗೆ ಬೇಗನೆ ತಲುಪುವಂತೆ ಮಾಡಲು ಈ ರೈಲನ್ನು ಘೋಷಿಸಿತ್ತು, ಅದರಂತೆ ಭಾರತೀಯ ರೈಲ್ವೆಯು ಸಾರ್ವಜನಿಕ ಮತ್ತು ಖಾಸಗಿ ಸಹಯೋಗ ದೊಂದಿಗೆ ಕಿಸಾನ್ ರೈಲು ಆರಂಭಿಸಿದೆ. * ರಾಜ್ಯದ ಮೊದಲ ಕಿಸಾನ್ ರೈಲು ಬೆಂಗಳೂರಿನ ಕಾಂತ್ರಿವೀರ ಸಂಗೊಳ್ಳಿರಾಯಣ್ಣ ರೈಲ್ವೇ ನಿಲ್ದಾಣ ಮತ್ತು ನಿಜಾಮುದ್ದೀನ್ ನಡುವೆ ಸಂಚರಿಸಲಿದೆ. * ಈ ರೈಲು ಮೈಸೂರು, ಹಾಸನ, ಅರಸೀಕೆರೆ, ದಾವಣಗೆರೆ, ಹುಬ್ಬಳ್ಳಿ, ಲೋಂಡ,ಬೆಳಗಾವಿ, ಮೀರಜ್, ಪುಣೆ,ಮನ್ಕಾಡ್ , ಭೂಸಾವಲ್, ಇಟಾರ್ಸಿ, ಭೂಪಾಲ್, ಝೂನ್ಸಿ, ಆಗ್ರಾ ದಂಡು ಮತ್ತು ಮಥುರಗಳಲ್ಲಿ ನಿಲುಗಡೆ ಹೊಂದಿದೆ. * ಕಿಸಾನ ರೈಲಿನಲ್ಲಿ ಪ್ರಯಾಣಿಕರ ಸಂಚಾರಕ್ಕೆ ಅವಕಾಶವಿರುವದಿಲ್ಲ.