Job Description: ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನೇತೃತ್ವದಲ್ಲಿ ಅಮೆರಿಕಾದ ಅಧಿಕೃತ ಆಡಳಿತ ಕಚೇರಿ ಶ್ವೇತ ಭವನದಲ್ಲಿ ಇಸ್ರೇಲ್, ಬಹ್ರೇನ್ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ (UAE) ನಡುವೆ ಶಾಂತಿ ಒಪ್ಪಂದಕ್ಕೆ ಚಾಲನೆ ನೀಡಲಾಯಿತು. ಇಸ್ರೇಲ್, ಯುಎಇ ಹಾಗೂ ಬಹ್ರೇನ್ ರಾಷ್ಟ್ರಗಳು ಪರಸ್ಪರ ಅಭಯ ರಾಷ್ಟ್ರಗಳಲ್ಲಿ ರಾಜತಾಂತ್ರಿಕ ಕಚೇರಿಗಳನ್ನು ತೆರೆದು, ಪರಸ್ಪರ ರಾಯಭಾರಿಗಳು ನೇಮಿಸಿ, ಜೊತೆಯಾಗಿ ಕಾರ್ಯಾಚರಣೆ ನಡೆಸಲಿದ್ದು, ಇವೆಲ್ಲ ರಾಷ್ಟ್ರಗಳು ಇನ್ನು ಸ್ನೇಹಿತರು' ಎಂದು ಶ್ವೇತ ಭವನ ಟ್ವೀಟ್ ಮೂಲಕ ಮಾಹಿತಿ ನೀಡಿದೆ. ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇತೃತ್ವದಲ್ಲಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು, ಬಹ್ರೇನ್ ವಿದೇಶಾಂಗ ಸಚಿವ ಅಬ್ದುಲ್ಲಾತಿಫ್ ಬಿನ್ ರಷೀದ್ ಅಲ್ ಝಯಾದಿ ಹಾಗೂ ಯುಎಐ ದೊರೆ ಮೊಹಮ್ಮದ್ ಬಿನ್ ಝೈದ್ ಅಬ್ರಹಾಂ ಪರಸ್ಪರ ಮೂರು ರಾಷ್ಟ್ರಗಳ ಅಧಿಕೃತ ಭಾಷೆಗಳಾದ ಇಂಗ್ಲಿಷ್, ಅರಾಬಿಕ್ ಹಾಗೂ ಹೀಬ್ರೂನಲ್ಲಿದ್ದ ಒಪ್ಪಂದಕ್ಕೆ ಸಹಿ ಹಾಕಿದರು.