Job Description: ನ್ಯೂಯಾರ್ಕ್: ಇತ್ತೀಚಿಗೆ ನಡೆದ ಮುಕ್ತ ಟೆನಿಸ್ ಪಂದ್ಯದಲ್ಲಿ ಮಹಿಳೆಯರ ಸಿಂಗಲ್ಸ್ ಅಂತಿಮ ಪಂದ್ಯದಲ್ಲಿ ಬೆಲಾರಸ್ ನ ವಿಕ್ಟೋರಿಯಾ ಅಜರೆಂಕಾ ಅವರ ವಿರುದ್ಧ ಜಪಾನ್ ನ ನವೋಮಿ ಒಸಾಕಾ ಸತತ ಮೂರನೇ ಬಾರಿಗೆ ಗ್ರಾಂಡ್ ಸ್ಲಾಮ್ ಪ್ರಶಸ್ತಿಯನ್ನು ಪಡೆದುಕೊಂಡರು. * ಚೀನಾದ ಲಿ ನಾ ಅವರ ಎರಡು ಗ್ರಾಂಡ್ ಸ್ಲಾಂ ಪ್ರಶಸ್ತಿ ಸಂಖ್ಯೆಯನ್ನು ಹಿಂದಿಕ್ಕಿ ಮೂರು ಗ್ರಾಂಡ್ ಸ್ಲಾಂ ಪ್ರಶಸ್ತಿ ಪಡೆಯುವ ಮೂಲಕ ಏಷ್ಯಾ ಖಂಡದ ಮೊದಲ ಆಟಗಾರ್ತಿಯಾಗಿದ್ದಾರೆ. * ಒಸಾಕಾ ಅವರು ಈ ಮೊದಲು 2018ರಲ್ಲಿ ಅಮೆರಿಕ ಓಪನ್ ಮತ್ತು 2019ರಲ್ಲಿ ಆಸ್ಟ್ರೇಲಿಯಾ ಓಪನ್ ಟೆನಿಸ್ ಸರಣಿಯ ಪ್ರಶಸ್ತಿಯನ್ನು ಪಡೆದಿದ್ದರು. * ಪ್ರಶಸ್ತಿಯು 30 ದಶಲಕ್ಷ ಡಾಲರ್ ನಗದು ಬಹುಮಾನ ಮತ್ತು ಪ್ರಶಸ್ತಿ ಫಲಕವನ್ನು ಒಳಗೊಂಡಿದೆ.