Job Description: ನವದೆಹಲಿ : ಏರೋ ಇಂಡಿಯಾ 2021 ವೈಮಾನಿಕ ಪ್ರದರ್ಶನವು ಬೆಂಗಳೂರಿನಲ್ಲೇ ನಡೆಸಲು ಇತ್ತೀಚಿಗೆ ತೀರ್ಮಾನ ಕೈಗೊಂಡ ಹಿನ್ನಲೆ ಇದೀಗ ಏರೋ ಇಂಡಿಯಾ 2021 ರ ಅಧಿಕೃತ ವೆಬ್ಸೈಟ್ಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಚಾಲನೆ ನೀಡಿದ್ದಾರೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 2021ರ ಫೆಬ್ರವರಿ 3ರಿಂದ 7ರವರೆಗೆ ಏರೋ ಇಂಡಿಯಾ ನಡೆಸಲು ತೀರ್ಮಾನಿಸಲಾಗಿದ್ದು, ಈ ಕುರಿತ ಮಾಹಿತಿ ಹಾಗೂ ಟಿಕೆಟಗಳ ಮಾರಾಟಕ್ಕಾಗಿ https://aeroindia.gov.in ವೆಬ್ಸೈಟ್ಗೆ ಸಚಿವರು ಚಾಲನೆ ದೊರೆತಿದೆ. * ವೆಬ್ಸೈಟ್ನಲ್ಲಿ ಕೇಂದ್ರ ರಕ್ಷಣಾ ಸಚಿವಾಲಯದ ನೀತಿ, ನಿಯಮಗಳು, ಹೊಸ ಯೋಜನೆಗಳ ವಿವರಗಳು ನೀಡಲಾಗಿದೆ. * ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ನಡೆಯುವ 13ನೇ ಆವೃತ್ತಿಯ ವೈಮಾನಿಕ ಪ್ರದರ್ಶನಕ್ಕೆ ಸಂಬಂಧಿಸಿದ ಎಲ್ಲ ಆನ್ಲೈನ್ ಸೇವೆಗಳನ್ನೂ ಈ ವೆಬ್ಸೈಟ್ ಮೂಲಕ ಪಡೆಯಬಹುದಾಗಿದೆ. * 1996 ರಲ್ಲಿ ಮೊದಲ ಏರೋ ಇಂಡಿಯಾ ವೈಮಾನಿಕ ಪ್ರದರ್ಶನ ಆರಂಭವಾದಾಗಿನಿಂದಲೂ ಬೆಂಗಳೂರಿನಲ್ಲಿ ಈ ಕಾರ್ಯಕ್ರಮ ನಡೆಯುತ್ತಿದೆ.