Job Description: ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಇತ್ತೀಚಿಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಕಾರ್ವಿುಕರ ಸಂಹಿತೆಗೆ ಮೂರು ಕಾನೂನು ಸೇರಿಸುವ ಪ್ರಸ್ತಾವನೆಗೆ ಕೇಂದ್ರ ಸಚಿವ ಸಂಪುಟ ಸಭೆ ಒಪ್ಪಿಗೆ ಸೂಚಿಸಿದೆ. ಈ ಸಂಹಿತೆಯು ಮುಂಗಾರು ಅಧಿವೇಶನದಲ್ಲಿ ಮಂಡನೆಯಾಗಲಿದೆ. ದೇಶದ ಕಾರ್ವಿುಕರಿಗೆ ಸಾಮಾಜಿಕ ಭದ್ರತೆ, ಔದ್ಯೋಗಿಕ ಸುರಕ್ಷತೆ, ಆರೋಗ್ಯ ಮತ್ತು ಕೆಲಸದ ಪರಿಸ್ಥಿತಿ ಹಾಗೂ ಕೈಗಾರಿಕಾ ಸಂಬಂಧ ಕುರಿತ ಹೊಸ ನಿಯಮಗಳು ಹಾಗೂ ಕಾರ್ಮಿಕರ ಸುರಕ್ಷತೆಗಾಗಿ ಕಾರ್ಖಾನೆಯಲ್ಲಿ ಅಳವಡಿಸಬೇಕಾದ ಸುರಕ್ಷತೆ, ಕಾರ್ವಿುಕ ಕಲ್ಯಾಣ, ಕೈಗಾರಿಕಾ ವಿವಾದ, ಕಾರ್ವಿುಕ ಒಕ್ಕೂಟಕ್ಕೆ ಸಂಬಂಧಿಸಿ ಕಾನೂನುಗಳನ್ನು ಅಲ್ಲದೆ ಈ ಕಾರ್ವಿುಕರ ಮೂರು ಸಂಹಿತೆ ಒಳಗೊಂಡಿದೆ.