Job Description: ಬೆಂಗಳೂರು: ನಟಿ ಹರಿಪ್ರಿಯಾ ಅಭಿನಯದ ಕನ್ನಡದ 'ಅಮೃತಮತಿ' ಚಿತ್ರವು ಈ ಮೊದಲು ಆಸ್ಟ್ರಿಯಾ, ನೋಯ್ಡಾ ಮತ್ತು ಅಟ್ಲಾಂಟ ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡಿದ್ದು, ಇದೀಗ ಅಮೆರಿಕಾದ ಬೋಸ್ಟನ್ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶನಕ್ಕೆ ಆಯ್ಕೆಯಾಗಿದೆ. * ಹದಿಮೂರನೇ ಶತಮಾನದ ಕನ್ನಡ ಕವಿ ಜನ್ನನು ಬರೆದಿರುವ 'ಯಶೋಧರ ಚರಿತೆ' ಕಾವ್ಯದ ಕಥೆ ಆಧರಿಸಿ 'ಅಮೃತಮತಿ' ಚಿತ್ರವನ್ನು ಹೆಣೆಯಲಾಗಿದ್ದು, ಚಿತ್ರವನ್ನು ಹಿರಿಯ ನಿರ್ದೇಶಕ ಬರಗೂರು ರಾಮಚಂದ್ರಪ್ಪ ಅವರು ನಿರ್ದೇಶಿಸಿದ್ದಾರೆ. * ಈ ಚಿತ್ರದಲ್ಲಿನ ಅತ್ಯುತ್ತಮ ಅಭಿನಯಕ್ಕಾಗಿ ಹರಿಪ್ರಿಯಾ ಅವರಿಗೆ ನೋಯ್ಡಾ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿ ಕೂಡ ದೊರೆತಿದೆ.