Job Description: ಟೋಕಿಯೊ: ಜಪಾನ್ ರಾಷ್ಟ್ರದ ದಕ್ಷಿಣ ಭಾಗಕ್ಕೆ ಇತ್ತೀಚಿಗೆ ಪ್ರಬಲ 'ಹೈಶೆನ್' ಚಂಡಮಾರುತ ಅಪ್ಪಳಿಸಿದ ಕಾರಣ ಜನಜೀವನ ತತ್ತರಿಸಿ ಅಪಾರ ಹನಿ ಉಂಟಾಗಿದೆ. ಈ ಚಂಡಮಾರುತ ಗಂಟೆಗೆ 162 ಕಿ.ಮೀ. ವೇಗದಲ್ಲಿ ಬೀಸುತ್ತಿದ್ದು, ಪರಿಣಾಮ ಭೀಕರವಾಗಿರಲಿದೆ ಎಂದು ಜಪಾನ್ ಹವಾಮಾನ ಸಂಸ್ಥೆ ಎಚ್ಚರಿಸಿದೆ. ಕಳೆದ ವಾರವಷ್ಟೇ ಜಪಾನಗೆ ಅಪ್ಪಳಿಸಿದ್ದ "ಮೇಸಕ್" ಚಂಡಮಾರುತದಿಂದ ಜನಜೀವನ ಸುಧಾರಿಸಿಕೊಳ್ಳುವ ಮೊದಲೇ ಜಪಾನ್ ಮತ್ತೊಂದು ಚಂಡಮಾರುತ ಹೊಡೆತಕ್ಕೆ ಸಿಲುಕಿ ತತ್ತರಿಸಿದೆ. * 'ಹೈಶೆನ್' ಎಂಬುದು ಚೀನಿ ಭಾಷೆಯ ಪದವಾಗಿದ್ದು, ಇದು ಸಮುದ್ರ ದೇವತೆ ಎಂಬ ಅರ್ಥ ನೀಡುತ್ತದೆ.