Job Description: ಸಾಹಿತ್ಯ ವಲಯದಲ್ಲಿ ನಾಟಕ ರಚನೆಯ ಮೂಲಕ ಪ್ರಸಿದ್ಧರಾಗಿ, ನೂರಕ್ಕೂ ಅಧಿಕ ನಾಟಕಗಳನ್ನು ರಚಿಸಿ “ಶತನಾಟಕ ಸರದಾರ” ಎಂದೇ ಖ್ಯಾತರಾಗಿದ್ದ ಸಾಹಿತಿ ಬೇಲೂರು ಕೃಷ್ಣಮೂರ್ತಿ ಅವರು ತಮ್ಮ 90 ನೇ ವಯಸ್ಸಿನಲ್ಲಿ ಹಾಸನದಲ್ಲಿ ಇಹಲೋಕ ತ್ಯಜಿಸಿದರು. ಇವರು ರಾಜ್ಯ ನಾಟಕ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಸೇರಿ ಹಲವು ಪ್ರಶಸ್ತಿ ಗೌರವಗಳಿಗೆ ಪಾತ್ರರಾಗಿದ್ದಾರೆ. * ಪ್ರಮುಖ ನಾಟಕಗಳು : ಬಲಿದಾನ, ಭಂಡಬಾಳು, ಅಸಲಿ ನಕಲಿ, ಆಹುತಿ ಸೇವೆ, ಜ್ವಾಲೆ * ಪ್ರಮುಖ ಕಾದಂಬರಿಗಳು : ದಾಹ, ಪುತ್ರವಾತ್ಸಲ್ಯ, ಬೆಟ್ಟದ ಬೈರಾಗಿ. * ಇವರು ‘ತೀರದ ಬಯಕೆ’ ಎಂಬ ಚಲನಚಿತ್ರವನ್ನು ನಿರ್ದೇಶಿಸಿದ್ದರು.