Job Description: ಮೈಸೂರು : ಸುಪ್ರೀಂ ಕೋರ್ಟ್ ನ ನಿರ್ದೇಶನಗಳು ಮತ್ತು ಕೇಂದ್ರ ಸರ್ಕಾರದ ಮಾರ್ಗಸೂಚಿಗಳ ಅನ್ವಯ 60 ವರ್ಷಕ್ಕಿಂತ ಮೇಲ್ಪಟ್ಟ ಯಾವುದೇ ಆನೆಗೆ ಭಾರವಾದ ಮತ್ತು ಒತ್ತಡದ ಕರ್ತವ್ಯವನ್ನು ವಹಿಸುವಂತಿಲ್ಲ, ಆದುದರಿಂದ ಪ್ರತಿ ವರ್ಷ ಅಂಬಾರಿ ಹೊರುತ್ತಿದ್ದ ಅರ್ಜುನ ಎಂಬ ಆನೆಗೆ 60 ವರ್ಷ ಮೀರಿರುವದರಿಂದ, ಈ ಬಾರಿಯ ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ 750 ಕೆಜಿ ತೂಕದ ಚಿನ್ನದ ಅಂಬಾರಿಯನ್ನು ಅಭಿಮನ್ಯು ಎಂಬ ಆನೆಗೆ ಹೊರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. * ಅರ್ಜುನ ಆನೆಯು ಸತತ ಎಂಟು ಬಾರಿ ಚಿನ್ನದ ಅಂಬಾರಿಯನ್ನು ಹೊತ್ತಿದೆ.