Job Description: ಚೆನ್ನೈ : ಜುಡಿತ್ ರೇವಿನ್ ಅವರನ್ನು ಚೆನ್ನೈನಲ್ಲಿರುವ ಅಮೆರಿಕ ದೂತವಾಸ ಕಚೇರಿಯ ಕಾನ್ಸುಲರ್ ಜನರಲ್ ಆಗಿ ನೇಮಕ ಮಾಡಲಾಗಿದೆ. ಈ ಮೊದಲು ಈ ಹುದ್ದೆಯಲ್ಲಿ ಕಾನ್ಸುಲರ್ ಜನರಲ್ ರಾಬರ್ಟ್ ಜಿ ಬುರ್ಜೆಸ್ ಅವರು ಕಾರ್ಯನಿರ್ವಹಿಸುತ್ತಿದ್ದರು. ಇವರ ದೂತವಾಸದ ಮುಖ್ಯಸ್ಥೆಯಾಗಿ ಅಧಿಕಾರಾವಧಿ ಮೂರು ವರ್ಷ ಇರಲಿದೆ. ಹಾಗೂ ಇವರ ಕಾರ್ಯ ವ್ಯಾಪ್ತಿ ಕರ್ನಾಟಕ, ತಮಿಳುನಾಡು, ಕೇರಳ, ಪುದುಚೇರಿ, ಅಂಡಮಾನ್ ನಿಕೋಬಾರ್ ದ್ವೀಪಗಳಾಗಿವೆ. ಕಾನ್ಸುಲರ್ ಜನರಲ್ ಅವರ ಮುಖ್ಯ ಕರ್ತವ್ಯವು ಭಾರತ ಮತ್ತು ಅಮೆರಿಕ ರಾಷ್ಟ್ರಗಳ ನಡುವಿನ ಸಂಬಂಧಗಳನ್ನ ಗಟ್ಟಿಗೊಳಿಸುವುದಾಗಿದೆ.