Job Description: ಇತ್ತೀಚಿನ ದಿನಗಳಲ್ಲಿ ಜನಪ್ರಿಯವಾಗಿರುವ ಗೇಮ್ ಆ್ಯಪ್ ಪಬ್ಜಿ ಸೇರಿ ಚೀನಾ ಮೂಲದ ಒಟ್ಟು 118 ಮೊಬೈಲ್ ಆ್ಯಪ್ಗಳನ್ನು ಕೇಂದ್ರ ಸರ್ಕಾರ ನಿಷೇಧಿಸಿ ಆದೇಶ ಹೊರಡಿಸಿದೆ. ಈ ಮೂಲಕ ಮೂರನೇ ಹಂತದಲ್ಲಿ ಚೀನಿ ಆಪ್ ಗಳನ್ನೂ ನಿಷೇದಿಸಿದಂತಾಯಿತು. ಭಾರತ ಮತ್ತು ಚೀನಾ ಗಡಿಯಲ್ಲಿ ವಾಸ್ತವ ನಿಯಂತ್ರಣ ರೇಖೆಯಲ್ಲಿ(LOC) ನಡುವೆ ಮತ್ತೆ ಚೀನಾವು ಸಂಘರ್ಷಕ್ಕೆ ಮುಂದಾಗಿರುವ ಬೆನ್ನಲ್ಲೇ ಈ ಕ್ರಮ ಕೈಗೊಳ್ಳಲಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆಯಾದರು, ಭದ್ರತೆಯ ಕಾರಣಕ್ಕಾಗಿ ಈ ನಿಷೇಧ ಹೇರಲಾಗಿದೆ ಎಂದು ಸರ್ಕಾರ ಹೇಳಿದೆ. * ಜೂನ್ನಲ್ಲಿ 59 ಆ್ಯಪ್ಗಳನ್ನು ನಿಷೇಧಿಸಲಾಗಿತ್ತು. ನಂತರದಲ್ಲಿ 47 ಆ್ಯಪ್ಗಳ ಮೇಲೆ ನಿಷೇಧ ಹೇರಲಾಗಿತ್ತು. ಇದೀಗ 118 ಚೀನಿ ಆ್ಯಪ್ಗಳ ನಿಷೇಧಿಸುವ ಮೂಲಕ ನಿಷೇಧಕ್ಕೆ ಒಳಗಾದ ಒಟ್ಟು ಆ್ಯಪ್ಗಳ ಸಂಖ್ಯೆ 224ಕ್ಕೆ ಏರಿಕೆಯಾಗಿದೆ. * ದೇಶದ ಮತ್ತು ಜನರ ಸುರಕ್ಷತೆ ದೃಷ್ಟಿಯಿಂದ ಐಟಿ ಕಾಯ್ದೆ 69ಎ ಸೆಕ್ಷನ್ ಅಡಿ ನಿಷೇಧದ ಕ್ರಮ ಕೈಗೊಳ್ಳಲಾಗಿದೆ