Job Description: ವರ್ಲ್ಡ್ ಇಂಟಲೆಕ್ಚುವಲ್ ಪ್ರಾಪರ್ಟಿ ಆರ್ಗನೈಸೇಶನ್(WIPO), ಕಾರ್ನೆಲ್ ವಿಶ್ವವಿದ್ಯಾಲಯ ಹಾಗೂ ಐಎನ್ಎಸ್ಎಡಿ ಬ್ಯುಸಿನೆಸ್ ಸ್ಕೂಲ್ ಜಂಟಿಯಾಗಿ 2020 ಗ್ಲೋಬಲ್ ಇನ್ನೋವೇಶನ್ ಇಂಡೆಕ್ಸ್ (ಜಿಐಐ)(ಜಾಗತಿಕ ಆವಿಷ್ಕಾರ ಸೂಚ್ಯಂಕ 2020) ನ್ನು ಬಿಡುಗಡೆಗೊಳಿಸಿದ್ದು ಇದೆ ಮೊದಲ ಬಾರಿಗೆ ಭಾರತ 48ನೇ ಸ್ಥಾನ ಪಡೆದಿದ್ದು, ಒಟ್ಟು ನಾಲ್ಕು ಸ್ಥಾನಗಳ ಏರಿಕೆ ಕಾಣುವ ಮೂಲಕ ಜಗತ್ತಿನ ಅಗ್ರ 50 ದೇಶಗಳ ಗುಂಪಿನಲ್ಲಿ ಸೇರಿಕೊಂಡಿರುವುದು ವಿಶೇಷ. *ಬಿಡುಗಡೆ ಮಾಡಿದ ಪಟ್ಟಿಯ ಪ್ರಕಾರ, ಆವಿಷ್ಕಾರ ಕ್ಷೇತ್ರದಲ್ಲಿ ಭಾರತ ಅತ್ಯಂತ ವೇಗವಾಗಿ ಅಭಿವೃದ್ಧಿ ಕಾಣುತ್ತಿರುವದು ಕಂಡುಬರುತ್ತದೆ. * ಮಧ್ಯ ಮತ್ತು ದಕ್ಷಿಣ ಏಷ್ಯಾದ ಆವಿಷ್ಕಾರ ಸೂಚ್ಯಂಕದಲ್ಲಿ ಭಾರತ ಅಗ್ರಸ್ಥಾನವನ್ನು ಪಡೆದಿದೆ. * ಜಾಗತಿಕ ಆವಿಷ್ಕಾರ ಸೂಚ್ಯಂಕದಲ್ಲಿ ಸ್ವಿಟ್ಜರ್ಲೆಂಡ್, ಸ್ವೀಡನ್, ಅಮೆರಿಕ, ಇಂಗ್ಲೆಂಡ್ ಮತ್ತು ನೆದರ್ಲ್ಯಾಂಡ್ ರಾಷ್ಟ್ರಗಳು ಕ್ರಮವಾಗಿ ಅಗ್ರ ಸ್ಥಾನಗಳನ್ನು ಪಡೆದಿವೆ. * ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ(IT) ಸೇವೆಗಳ ರಫ್ತು, ಸರ್ಕಾರಿ ಆನ್ಲೈನ್ ಸೇವೆಗಳು, ವಿಜ್ಞಾನ ಮತ್ತು ಎಂಜಿನಿಯರಿಂಗ್ ಪದವೀಧರರ ಸೂಚ್ಯಂಕದಲ್ಲಿ ಭಾರತ ಅಗ್ರ 15 ರಾಷ್ಟ್ರಗಳ ಪಟ್ಟಿ ಸ್ಥಾನ ಪಡೆದಿದೆ.