Job Description: ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ನಾಗರಿಕ ಸೇವೆಗಳ ಸಾಮರ್ಥ್ಯ ವೃದ್ಧಿಸುವ ರಾಷ್ಟ್ರೀಯ ಕಾರ್ಯಕ್ರಮವಾದ (NPCSCB) "ಮಿಷನ್ ಕರ್ಮಯೋಗಿ" ಯನ್ನು ಆರಂಭಿಸಲು ಅನುಮೋದನೆ ನೀಡಲಾಯಿತು. - iGOTKarmayogi ಎಂಬ ಡಿಜಿಟಲ್ ಪ್ಲಾಟ್ಫಾರ್ಮ್ ಸ್ಥಾಪಿಸುವ ಮೂಲಕ "ಮಿಷನ್ ಕರ್ಮಯೋಗಿ' ಕಾರ್ಯಕ್ರಮವನ್ನು ಪ್ರಾರಂಭಿಸಲಾಗುವದು. - ಈ ಡಿಜಿಟಲ್ ವೇದಿಕೆ ಮೂಲಕ ನಾಗರೀಕ ಸೇವೆಗಳ ಅಧಿಕಾರಿಗಳಿಗೆ ಪ್ರಾಮಾಣಿಕ ಸಾಮರ್ಥ್ಯಗಳೊಂದಿಗೆ ಉನ್ನತ ಗುಣಮಟ್ಟದ ಮಾನದಂಡಗಳ ದಕ್ಷ ಸೇವೆ ನೀಡಲು ಸಾಧ್ಯವಾಗುತ್ತದೆ ಎಂದು ಸರ್ಕಾರ ತಿಳಿಸಿದೆ. - ಎನ್ಪಿಸಿಎಸ್ಸಿಬಿಯನ್ನು ಪ್ರಧಾನಮಂತ್ರಿಯ ಮಾನವ ಸಂಪನ್ಮೂಲ ಮಂಡಳಿಯು ನಿರ್ವಹಿಸಲಿದ್ದು, ಇದರಲ್ಲಿ ರಾಜ್ಯ ಮುಖ್ಯಮಂತ್ರಿಗಳು, ಕೇಂದ್ರ ಕ್ಯಾಬಿನೆಟ್ ಮಂತ್ರಿಗಳು ಮತ್ತು ತಜ್ಞರು ಸೇರಿದ್ದಾರೆ. ಈ ಕೌನ್ಸಿಲ್ ನಾಗರಿಕ ಸೇವಾ ಸಾಮರ್ಥ್ಯ ವೃದ್ಧಿ ಕಾರ್ಯಕ್ರಮಗಳನ್ನು ಅನುಮೋದನೆ ಮತ್ತು ಪರಿಶೀಲಿಸುತ್ತದೆ.