Job Description: ಬೆಂಗಳೂರು: ಬೆಂಗಳೂರು ಹೊರವಲಯದ ನೆಲಮಂಗಲ ಮತ್ತು ಸೊಲ್ಹಾಪುರ ಸಮೀಪದ ಬೇಲ್ ನಡುವೆ ಮೊದಲ ರೋಲ್ಆನ್-ರೋಲ್ಆಫ್ ಸೇವೆಗೆ ರಾಜ್ಯದ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಚಾಲನೆ ನೀಡಿದರು. * ರೈಲ್ವೆ ಸಚಿವಾಲಯ 2020 ರ ಏಪ್ರಿಲ್ನಲ್ಲಿ ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವೆ ರೋಲ್ಆನ್-ರೋಲ್ಆಫ್ ಸೇವೆಗೆ ಅನುಮತಿ ನೀಡಿತ್ತು. * ನೈಋತ್ಯ ರೈಲ್ವೆಯು ಆರಂಭಿಸಿರುವ ಮೊಟ್ಟ ಮೊದಲ ರೋ ರೋ ಸೇವೆ ಇದಾಗಿದೆ. * ಮೊದಲ ರೋ ರೋ ರೈಲು ಸರಕುಗಳನ್ನು ಹೊತ್ತ ಲಾರಿಯನ್ನು ತುಂಬಿಕೊಂಡು ನೆಲಮಂಗಲ ಮಹಾರಾಷ್ಟ್ರದ ಸೊಲ್ಹಾಪುರ ಹತ್ತಿರದ ಬೇಲ್ ಗೆ ಪ್ರಯಾಣ ಬೆಳಸಿದೆ. * ಈ ರೈಲು 43 ಓಪನ್ ವ್ಯಾಗನ್ಗಳನ್ನು ಹೊಂದಿದ್ದು, 682 ಕಿ. ಮೀ. ಪ್ರಯಾಣ ಮಾಡಲಿದೆ.