Job Description: ಭಾರತದ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ದಿನಾಂಕ 31 ಆಗಸ್ಟ್ 2020 ರಂದು ತಮ್ಮ 84 ವರ್ಷದಲ್ಲಿ ವಿಧಿವಶರಾಗಿದ್ದಾರೆ. ಪಶ್ಚಿಮ ಬಂಗಾಳದ ಬಿರ್ಬೂಮ್ ಜಿಲ್ಲೆಯ ಮಿರತಿ ಇವರ ಜನ್ಮಸ್ಥಳ. ತಂದೆ ಕಿಂಕರ್ ಮುಖರ್ಜಿ ಹಾಗೂ ತಾಯಿ ರಾಜಲಕ್ಷ್ಮೀ ದಂಪತಿಗೆ 1935ರ ಡಿಸೆಂಬರ್ 11ರಂದು ಜನಿಸಿದರು. ಶ್ರೀಯುತರು ದೇಶದ 13ನೇ ರಾಷ್ಟ್ರಪತಿಯಾಗಿ ತಮ್ಮ ಅಮೂಲ್ಯ ಸೇವೆ ಸಲ್ಲಿಸಿದ್ದರು. * ಭಾರತದ 13ನೇ ರಾಷ್ಟ್ರಪತಿಯಾಗಿದ್ದ ಪ್ರಣಬ್ ಮುಖರ್ಜಿ 2012ರ ಜು.25 ರಿಂದ 2017ರ ಜುಲೈ 25ರವರೆಗೆ ಸೇವೆ ಸಲ್ಲಿಸಿದ್ದರು. * ಮೊದಲು ಕಾಲೇಜು ಉಪನ್ಯಾಸಕರಾಗಿ ವೃತ್ತಿಜೀವನ ಆರಂಭ ನಂತರ ಪತ್ರಕರ್ತರಾಗಿ ಕೆಲಸ ಮುಂದುವರಿಕೆ. * 1969ರಲ್ಲಿ ಕಾಂಗ್ರೆಸ್ನಿಂದ ರಾಜ್ಯಸಭೆಗೆ ಆಯ್ಕೆ. ನಂತರ, 1975, 1981, 1993, 1999ರಲ್ಲಿ ರಾಜ್ಯಸಭೆಗೆ ಪುನಾರಾಯ್ಕೆ * 1982ರಿಂದ 1984ರವರೆಗೆ ಕೇಂದ್ರ ಹಣಕಾಸು ಸಚಿವರಾಗಿ ಕರ್ತವ್ಯ ನಿರ್ವಹಣೆ. * ರಕ್ಷಣಾ, ಹಣಕಾಸು, ಆಂತರಿಕಾ ಭದ್ರತಾ ಇಲಾಖೆ, ಸಾರಿಗೆ, ವಾಣಿಜ್ಯ ಮತ್ತು ಉದ್ದಿಮೆ ಸಚಿವರಾಗಿ ಸೇವೆ ಸಲ್ಲಿಸಿದ ಅನುಭವಿ.