Job Description: ಟೋಕಿಯೋ : ಜಪಾನ್ ಪ್ರಧಾನಿ ಶಿಂಜೋ ಅಬೆ ಅವರು ತಮ್ಮ ಅನಾರೋಗ್ಯ ಸಮಸ್ಯೆಯ ಕಾರಣದಿಂದ ಹುದ್ದೆ ತ್ಯಜಿಸುವುದಾಗಿ ಮಾಹಿತಿ ನೀಡಿದ್ದಾರೆ. ಇವರು ಜಪಾನ್ನ ಅತ್ಯಂತ ಸುದೀರ್ಘಾವಧಿ ಪ್ರಧಾನಿ ಎಂಬ ಹೆಗ್ಗಳಿಕೆ ಪಡೆದಿರುವ ಶಿಂಜೋ ಅಬೆಯವರು, ಅನೇಕ ಸವಾಲುಗಳ ನಡುವೆಯೂ ಜಪಾನ್ಅನ್ನು ಮೂರನೇ ಅತ್ಯಂತ ದೊಡ್ಡ ಆರ್ಥಿಕತೆಯ ದೇಶವನ್ನಾಗಿಸಿದ್ದಾರೆ. * ಅಬೆ ಅವರ ಅಧಿಕಾರಾವಧಿ 2021ರ ಸೆಪ್ಟೆಂಬರ್ಗೆ ಅಂತ್ಯಗೊಳ್ಳಲಿತ್ತು, ಆದರೆ 65 ವರ್ಷದ ಶಿಂಜೋ ಅಬೆ ಕರುಳು ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವುದರಿಂದ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ. * 'ನಾನು ಜನರಿಗಾಗಿ ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗದೆ ಹೋದರೆ ನಾನು ಉತ್ತಮ ಪ್ರಧಾನಿಯಾಗಲು ಸಾಧ್ಯವಿಲ್ಲ. ನಾನು ನನ್ನ ಹುದ್ದೆಯಿಂದ ಕೆಳಕ್ಕಿಳಿಯಲು ನಿರ್ಧರಿಸಿದ್ದೇನೆ' ಎಂದು ಅಬೆಯವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.